ಎಸ್.ಡಿ.ಎಂ : ರತ್ನಮಾನಸ ವಸತಿ ನಿಲಯ ಪ್ರವೇಶಾತಿ ಆರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ನಿರ್ವಹಿಸಲ್ಪಡುತ್ತಿರುವ ಉಚಿತ ಶಿಕ್ಷಣ ಪದ್ಧತಿಯೊಂದಿಗಿನ ರತ್ನಮಾನಸ ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಏಳನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹು ದಾಗಿದೆ.

ಏಪ್ರಿಲ್10 ರಿಂದ 25 ರೊಳಗೆ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಬಹುದು. ಪ್ರೌಢಶಾಲಾ ಹಂತದ ಮೂರು ವರ್ಷಗಳ ವ್ಯಾಸಂಗ ನಿರತ ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಈ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣವನ್ನು ಒದಗಿಸಲಾಗುತ್ತದೆ. ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 600 ಅಂಕಗಳ ಲಿಖಿತ ಹಾಗೂ ಮೌಖಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ನಡವಳಿಕೆ, ಕಾರ್ಯಕ್ಷಮತೆ, ಹೊಂದಾಣಿಕೆಯ ಗುಣಸ್ವಭಾವ, ಸಮಯ ಪ್ರಜ್ಞೆ ಸೇರಿದಂತೆ ವಿವಿಧ ಅಂಶಗಳನ್ನು ಗುರುತಿಸಲು ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತದೆ. ಮಕ್ಕಳಲ್ಲಿ ಜೀವನ ಶಿಕ್ಷಣ, ಮಾನವೀಯ ಮೌಲ್ಯ, ಪರಿಸರ ಪರ ಕಾಳಜಿ, ಸ್ವಯಂ ಉದ್ಯೋಗ ಕಂಡುಕೊಳ್ಳುವ ಪ್ರಜ್ಞೆ ಮೂಡಿಸಲಾಗುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುವ ವಾತಾವರಣದೊಂದಿಗೆ ಗುರುತಿಸಿಕೊಂಡಿರುವ ರತ್ನಮಾನಸ ವಸತಿನಿಲಯದ ಕುರಿತು ಮೊಬೈಲ್ ಮೂಲಕ ಹೆಚ್ಚಿನ ಮಾಹಿತಿ (ಮೊಬೈಲ್:9449488976) ಪಡೆಯಬಹುದು.
– ವರದಿ: ಪ್ರಶಾಂತ್ ಎಸ್ ಕೆಳಗೊರ್, ಎಸ್ ಡಿ ಎಂ ಕಾಲೇಜು ಉಜಿರೆ

ರತ್ನಮಾನಸ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧಿಸಿದಂತೆ ತರಬೇತಿ ಪಡೆಯುತ್ತಾರೆ. ವ್ಯಾಪಾರ ವಹಿವಾಟು ನಡೆಸುವ ಕೌಶಲ್ಯವನ್ನೂ ರೂಢಿಸಿಕೊಳ್ಳುತ್ತಾರೆ. ಅಂಚೆ ಕಚೇರಿ, ಪೋಲಿಸ್ ಠಾಣೆ, ನ್ಯಾಯಾಲಯಗಳಿಗೆ ಭೇಟಿ ನೀಡಿ ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ತಿಳಿದು ಕೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯ ಕ್ರಮ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.