ಮುಂಡಾಜೆ ವಾಲಿಬಾಲ್ ಲೀಗ್ ಪಂದ್ಯಾಟ

Advt_NewsUnder_1
Advt_NewsUnder_1

ಮುಂಡಾಜೆ: ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಹೊನಲು ಬೆಳಕಿನ ಮುಂಡಾಜೆ ವಾಲಿಬಾಲ್ ಲೀಗ್ ಪಂದ್ಯಾಟ ಮಾ. 10 ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ತಾ| ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘದ ಉಪಾಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಮೆಸ್ಕಾಂ ಇಲಾಖೆ ಸಹಾಯಕ ಲೆಕ್ಕಾಧಿಕಾರಿ ಮುರಳೀಧರ ನಾಯಕ್ ಕಡಿರುದ್ಯಾವರ, ಮಾಜಿ ಸೈನಿಕ ಸದಾಶಿವ ಗೌಡ ಕುದುರು, ಕೃಷಿಕ ರಾಮಚಂದ್ರ ಭಟ್ ಅರೆಕ್ಕಲ್, ಸಿವಿಲ್ ಗುತ್ತಿಗೆದಾರ ಜನಾರ್ದನ ಗೌಡ ಉಜಿರೆ, ಸ್ಥಳೀಯ ಎಮ್.ಎಮ್ ಪಿಲಿಪ್ ಭಾಗಿಯಾಗಿ ಶುಭ ಕೋರಿದರು.
ಈ ಸಮಾರಂಭದಲ್ಲಿ ಅಪರಾಧ ರಹಿತ ಮತ್ತು ಅಪಘಾತ ರಹಿತ ಚಾಲಕ ಪ್ರಶಸ್ತಿಗೆ ಭಾಜನರಾದ ನಾರಾಯಣ ಪೂಜಾರಿ ದುಂಬೆಟ್ಟು ಮತ್ತು ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ವಸಂತ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ಯಂಗ್ ಚಾಲೆಂಜರ್‍ಸ್ ಸಂಘದ ಸಂಚಾಲಕ ನಾಮದೇವ ರಾವ್ ಸ್ವಾಗತಿಸಿದರು. ಶಿಕ್ಷಕ ರೋಶನ್ ವಂದಿಸಿದರು.
ರಾತ್ರಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಗರ್ ಬ್ರದರ್‍ಸ್‌ನ ಸಿದ್ದೀಕ್, ಗುತ್ತಿಗೆದಾರ ರಾಘವ ಶೆಟ್ಟಿ, ನಿವೃತ್ತ ರೇಷ್ಮೆ ಅಧಿಕಾರಿ ಬಾಬು ಪೂಜಾರಿ ಕೂಳೂರು, ಡಾ.ಶಿವಾನಂದ ಸ್ವಾಮಿ ಭಾಗಿಯಾಗಿದ್ದರು. ವಿಜೇತ ತಂಡಗಳಾದ ಉಮರ್ ಮಾಲಕತ್ವದ ಸಾಗರ್ ಫ್ರೆಂಡ್ಸ್ ಪ್ರಥಮ, ನಾರಾಯಣ ಪೂಜಾರಿ ಮಾಲಕತ್ವದ ಮುಂಡಾಜೆ ಎಟೇಕರ್‍ಸ್ ತಂಡಕ್ಕೆ ದ್ವಿತೀಯ ಬಹುಮಾನ ವಿತರಿಸಲಾಯಿತು. ನಾಮದೇವ ರಾವ್ ನಿರೂಪಿಸಿದರು. ಸಂಘದ ನಿರ್ದೇಶಕರಾದ ಪ್ರವೀಣ್ ಪೂಜಾರಿ, ವಿಜಯ ಕುಮಾರ್, ಪುಷ್ಪರಾಜ್, ಸಾಂತಪ್ಪ, ಸಚಿನ್ ಶೆಟ್ಟಿ, ಮೊದಲಾದವರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.