ಚಾರ್ಮಾಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Advt_NewsUnder_1
Advt_NewsUnder_1

ಸಮಾಜಕ್ಕೆ ಮಹಿಳೆಯರ ಕೊಡುಗೆ ಅತ್ಯಂತ ಶ್ರೇಷ್ಠವಾದುದು

ಚಾರ್ಮಾಡಿ: ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಮತ್ತು ಸಿರೋ ಮಲಬಾರ್ ಮಾತೃವೇದಿ ತೋಟತ್ತಾಡಿ ವಲಯ ಇವರ ಜಂಟಿ ನೇತೃತ್ವದಲ್ಲಿ ಗ್ರಾಮ ಪಂಚಾಯತು ಚಾರ್ಮಾಡಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ, ಸೈಂಟ್ ತೋಮಸ್ ಕಾಲೇಜು ಬೆಳ್ತಂಗಡಿ, ಸುರಕ್ಷಾ ಕಾರ್ಯಕಾರಿ ಸಮಿತಿ ನೆರಿಯ ಇವರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ ಮಾ.8 ರಂದು ಚಾರ್ಮಾಡಿ ಗ್ರಾ.ಪಂ ವಠಾರದಲ್ಲಿ ಜರುಗಿತು.
ಕತ್ರಿಗುಡ್ಡೆಯಿಂದ ಸಭಾಂಗಣದವರೆಗೆ ನಡೆದ ಜನಜಾಗೃತಿ ಜಾಥಾವನ್ನು ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉಜಿರೆ ಕ್ಷೇತ್ರದ ಜಿ.ಪಂ ಸದಸ್ಯೆ ನಮಿತಾ ಕೆ. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ಮಹಿಳೆಯರಿಗೆ ಶೇ 33 ಮೀಸಲಾತಿ ಜಾರಿಯಾಯಿತು. ನಮ್ಮದು ಶೇ 50  ಮೀಸಲಾತಿ ಬೇಕೆಂದು ಹೋರಾಟವಾಗಿತ್ತು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೇ 50  ಮೀಸಲಾತಿಯನ್ನು ಜಾರಿ ಮಾಡಿದ್ದರು.  ಮಹಿಳೆಯರು ಸಂಘಟಿತರಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಎಲಿಯಾಮ್ಮ ತೋಮಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಇದರ ಉಪಾಧ್ಯಕ್ಷ ಜೇಮ್ಸ್ ಅಬ್ರಾಹಂ, ಮಾತೃವೇದಿ ತೋಟತ್ತಾಡಿ ವಲಯಾಧ್ಯಕ್ಷೆ ಜೆಸ್ಸಿ ನಿರ್ಮಲ ಭಾಗವಹಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಸುರಕ್ಷಾ ಕಾರ್ಯಕಾರಿ ಸಮಿತಿ ನೆರಿಯದ ಕಾರ್ಯದರ್ಶಿ ಪೂರ್ಣಿಮ, ಮಾತೃವೇದಿ ನಿರ್ದೇಶಕ ವಂ.ಸ್ವಾ. ತೋಮಸ್ ಪುದಿಯೆರ, ಡಿ.ಕೆ.ಆರ್.ಡಿ.ಎಸ್ ನಿರ್ದೇಶಕ ವಂ.ಸ್ವಾ. ಜೋಸ್ ಆಯಾಂಕುಡಿ ಉಪಸ್ಥಿತರಿದ್ದರು.
ಸೈಂಟ್ ತೋಮಸ್ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ಸ್ನೇಹ ಜ್ಯೋತಿ ಒಕ್ಕೂಟದ ಕೋಶಾಧಿಕಾರಿ ಜಾನೆಟ್ ಸ್ವಾಗತಿಸಿದರು. ಸ್ನೇಹ ಜ್ಯೋತಿ ಒಕ್ಕೂಟದ ಮಂಗಳಾ ಜೋನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಸಬಲೀಕರಣ ಯೋಜನೆ ಸಂಯೋಜಕಿ ಕು. ಶುಭ ಮತ್ತು ಮಿನಿ ತೋಮಸ್ ಕಾರ್ಯಕ್ರಮ ನಿರೂಪಿಸಿ, ಸ್ನೇಹ ಜ್ಯೋತಿ ಒಕ್ಕೂಟದ ಜೊತೆ ಕಾರ್ಯದರ್ಶಿ ಸಿಲ್ವಿ ಎ.ಟಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.