ನಿಡಿಗಲ್ ಶ್ರೀ ಮಹಾಗಣಪತಿ ದೇವಸ್ಥಾನ ರೂ.90 ಲಕ್ಷ ವೆಚ್ಚದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ನಿಡಿಗಲ್: ಪವಿತ್ರ ನದಿ ನೇತ್ರಾವತಿಯ ದಂಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪುರಾತನವಾದ ಅನಾದಿಕಾಲದಿಂದಲೂ ಸಾರ್ವಜನಿಕ ಭಕ್ತರು ಆರಾಧಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಶ್ರೀ ಮಹಾಗಣಪತಿ ದೇವಸ್ಥಾನದ ಜೀಣೋದ್ಧಾರಕ್ಕೆ ಭಗವತ್‌ಭಕ್ತರು ಸಂಕಲ್ಪ ಮಾಡಿದ್ದಾರೆ.
ಇದರನ್ವಯ ಮಾ.8 ರಂದು ಎಡಪದವು ಶ್ರೀ ವೆಂಕಟೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಸಿವಿಲ್‌ಗುತ್ತಿಗೆದಾರ ರಾಮ ಕಾಮತ್ ಉಜಿರೆ ಇವರು ನೂತನ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರಪರವೂರ ಗಣ್ಯರು, ಊರವರು, ಭಕ್ತರು ಪ್ರಭು ಕುಟುಂಬಸ್ಥರು ಉಪಸ್ಥಿತರಿದ್ದರು.
ಭಕ್ತರ ನಂಬಿಕೆಯ ಕ್ಷೇತ್ರ : ಶ್ರೀ ದೇವಳದಲ್ಲಿ ತ್ರಿಕಾಲ ಪೂಜೆ, ಸಂಕಷ್ಟ ಚತುರ್ಥಿ ಪೂಜೆ, ನವರಾತ್ರಿಯ ದಿನಗಳಲ್ಲಿ ವಿಶೇಷ ಪೂಜೆ, ಶ್ರೀ ಗಣೇಶ ಚತುರ್ಥಿ, ಯುಗಾದಿ, ದೀಪಾವಳಿ, ನಾಗರಪಂಚಮಿ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ದೀಪೋತ್ಸವ ಅಲ್ಲದೆ ಶ್ರೀ ಅಶ್ವಥ್ಥ ನಾರಾಯಣ, ನಾಗದೇವರು, ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಶ್ರೀ ದೇವರಲ್ಲಿ ದೈನ್ಯಭಾವದಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕೇಳಿಕೊಂಡಲ್ಲಿ ಶ್ರೀ ವಿನಾಯಕನು ತಮ್ಮ ಇಚ್ಚೆಯಂತೆ ಅನುಗ್ರಹ ಕೊಡುವನು. ನೂತನ ವಧು ವರರು, ಮದುವೆ ಆಗದೇ ಇದ್ದವರು, ಮಕ್ಕಳಾಗದೇ ಇದ್ದವರು, ವಿದ್ಯಾರ್ಥಿಗಳು, ಉದ್ಯೋಗ ರಹಿತರು, ಅಸೌಖ್ಯದಿಂದ ತೊಂದರೆ ಅನುಭವಿಸುವವರು ಇಲ್ಲಿ ಪ್ರಾರ್ಥಿಸಿದರೆ ಗಣಪತಿಯು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.