ಕಳಿಯ : ಪಲ್ಸ್ ಪೋಲಿಯೊ ನಿರ್ಮೂಲನೆ ಲಸಿಕಾ ಕಾರ್ಯಕ್ರಮ

ಕಳಿಯ : ಇಲ್ಲಿಯ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ಮಾ.10 ರಂದು ನಡೆಯಿತು. ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಭಾರತಿ ಬೇಬಿ ಗೌಡ ಎರಡು ಹನಿ ಪೋಲಿಯೊ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವುದರಿಂದ ಪೋಲಿಯೊ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಈ ಯಶಸ್ವಿಗೆ ಮಕ್ಕಳ ಪೋಷಕರು ಕೈಜೋಡಿಸಿದಾಗ ಪೋಲಿಯೊ ನಿರ್ಮೂಲನೆಯಿಂದ ಮಗು ಸುರಕ್ಷಿತ ಎಂದು ಹೇಳಿದರು.ಈ ಸಂದರ್ಭದಲ್ಲಿ ಎರುಕಡಪ್ಪು ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್, ಬಟ್ಟೆಮಾರು ಅಂಗನವಾಡಿ ಕಾರ್ಯಕರ್ತೆ ಸುಂದರಿ, ಕಳಿಯ ಅಶಾ ಕಾರ್ಯಕರ್ತೆ ಯಾರಾದ ಪ್ರತಿಭಾ, ಭವಾನಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.