ಉಜಿರೆ: ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ವತಿಯಿಂದ ಅಭಿನಂದನಾ ಸಮಾರಂಭ

ಉಜಿರೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಸಂಘ, ತಾ.ಯುವ ವೇದಿಕೆ ಮತ್ತು ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೇವಾ ಸಹಕಾರಿ ನಿಯಮಿತ ಇದರ ಜಂಟಿ ಸಹಯೋಗದಲ್ಲಿ ಉಜಿರೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಉದ್ಘಾಟಿಸಲ್ಪಟ್ಟು ಸಮಾಜಕ್ಕೆ ಅರ್ಪಿಸಲಾದ ಸಹಕಾರಿ ಸಂಘದ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಸಮಾಜ ಬಾಂಧವರಿಗೆ ಅಭಿನಂದನಾ ಸಭೆ ಉಜಿರೆ ಎಸ್‌ಪಿ ಆಯಿಲ್ ಮಿಲ್ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಕೇರಿಮಾರ್ ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಸಿಇಒ ದಿನೇಶ್ ಗೌಡ ಕಲ್ಲಾಜೆ ಬ್ಯಾಂಕ್ ಪ್ರಾರಂಭದಿಂದ ಆ ದಿನದವರೆಗಿನ ಲೆಕ್ಕಪತ್ರ ಸಭೆಯ ಮುಂದಿಟ್ಟರು. ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ ಮತ್ತು ಸಂಘದ ಕಾರ್ಯದರ್ಶಿ ಯಂ ತುಂಗಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು. ಮೂಡಿಗೆರೆ ತಾಲೂಕು ದೇವರುಮನೆ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚೆನ್ನಕೇಶವ ಗೌಡ ಮುಖ್ಯ ಅತಿಥಿಯಾಗಿದ್ದು, ಮುಂದಿನ ತಿಂಗಳು ಶ್ರೀ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಹಕಾರಿ ಸಂಘದ ನಿರ್ದೇಶಕ ಶಿವಕಾಂತ ಗೌಡ ಉಜಿರೆ, ಜಯಂತ ಗೌಡ ಗುರಿಪಳ್ಳ, ದಾಮೋದರ ಗೌಡ ಸುರುಳಿ, ಯುವ ವೇದಿಕೆ ಅಧ್ಯಕ್ಷ ಸುಧಾಕರ ಗೌಡ ಧರ್ಮಸ್ಥಳ, ಕಾರ್ಯದರ್ಶಿ ಅನಿಲ್ ಕುಮಾರ್ ಅಂತರ ಉಪಸ್ಥಿತರಿದ್ದರು. ಈ ವೇಳೆ ಅವರು ಕಾರ್ಯಕ್ರಮದ ದಿನ ಯುವಕರ ಪಾತ್ರವನ್ನು ನೆನೆದುಕೊಂಡು ಅಭಿನಂದನೆ ಸಲ್ಲಿಸಿದರು. ಸಹಕಾರಿ ಸಂಘದ ನಿರ್ದೇಶಕ ಎನ್ ಲಕ್ಷ್ಮಣ ಗೌಡ ಬಂಗಾಡಿ ಸ್ವಾಗತಿಸಿದರು. ಸಂಘದ ಪ್ರ. ಕಾರ್ಯದರ್ಶಿ ಕೆ ಬಾಲಕೃಷ್ಣ ಗೌಡ ಕಲ್ಲಾಜೆ ನಿರೂಪಿಸಿ ಧನ್ಯವಾದವಿತ್ತರು. ಸಮಾರಂಭದಲ್ಲಿ ಸಮಾಜದ ಗಣ್ಯರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.