HomePage_Banner_
HomePage_Banner_

ಧರ್ಮಸ್ಥಳ: ನೇತ್ರಾವತಿಯಿಂದ ಜೋಡುಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

ನೇತ್ರಾವತಿಯಿಂದ ಜೋಡುಸ್ಥಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು

ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಶಾಸಕ ಹರೀಶ್ ಪೂಂಜ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್ ಹಾಗೂ ಧರ್ಮಸ್ಥಳ ಪಂಚಾಯತ್ ಅಭಿವೃಧ್ದಿ ಅಧಿಕಾರಿ ಉಮೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಧರ್ಮಸ್ಥಳ: ನೇತ್ರಾವತಿಯಿಂದ ಜೋಡುಸ್ಥಾನದವರೆಗಿನ ರಸ್ತೆಗೆ ರೂ.25 ಲಕ್ಷ ಅನುದಾನವನ್ನು ಶಾಸಕರ ವಿಶೇಷ ಅನುದಾನದಿಂದ ಒದಗಿಸಲಾಗಿದ್ದು, ಇದರ ಶಂಕುಸ್ಥಾಪನೆ, ಜೋಡುಸ್ಥಾನದಲ್ಲಿ ಕಾಂಕ್ರೀಟಿಕರಣಗೊಂಡ ಎರಡು ರಸ್ತೆಗಳ ಉದ್ಘಾಟನಾ ಕಾರ್ಯಕ್ರಮವು ಮಾ.10 ರಂದು ನಡೆಯಿತು. ಶಂಕು ಸ್ಥಾಪನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಮಾತನಾಡಿ, ನೇತ್ರಾವತಿ ರೂ.25 ಲಕ್ಷ ರೂ. ಮಂಜೂರಾಗಿದ್ದು ಇನ್ನುಳಿದ ಕಾಮಗಾರಿಗೆ ಮುಂದಿನ ಯೋಜನೆಯಲ್ಲಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಶಾಸಕ ಹರೀಶ್ ಪೂಂಜ, ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್ ಹಾಗೂ ಧರ್ಮಸ್ಥಳ ಪಂಚಾಯತ್ ಅಭಿವೃಧ್ದಿ ಅಧಿಕಾರಿ ಉಮೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಕ್ಷ್ಮೀನಾರಾಯಣ ರಾವ್ ಜೋಡುಸ್ಥಾನ, ಎಪಿಎಂಸಿ ಅಧ್ಯಕ್ಷ ಕೇಶವ ಗೌಡ, ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.