HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವೇಣೂರು: ವಿಶೇಷ ಚೇತನ ಮಕ್ಕಳೊಂದಿಗೆ ವಿಶ್ವ ಮಹಿಳಾ ದಿನಾಚರಣೆ

ವೇಣೂರು: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯ ಜಂಟಿ ಆಶ್ರಯದಲ್ಲಿ ಮಾ .8 ರಂದು  ವೇಣೂರು ನವಚೇತನ ವಿಶೇಷ ಶಾಲೆಯಲ್ಲಿ ವಿಕಲ ಮತ್ತು ವಿಶೇಷ ಚೇತನ ಮಕ್ಕಳೊಂದಿಗೆ ವಿಶಿಷ್ಠ್ಯ ರೀತಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಸಂಗೀತಾ ಪಿ. ಹೇರಾಜೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಶ್ರೀ ಗು.ಸ್ವಾ. ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ  ವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ಪದವೀಧರ ಮುಖ್ಯಶಿಕ್ಷಕಿ ಶಶಿಪ್ರಭಾ ಡಿ.ಕೆ. ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಬೆಳ್ತಂಗಡಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ, ನಿವೃತ್ತ ಎಸ್‌ಪಿ ಪೀತಾಂಬರ ಹೇರಾಜೆ, ವಿಶೇಷಚೇತನ ಶಾಲೆಯ ಮುಖ್ಯ ಶಿಕ್ಷಕಿ ಸಿ| ಪ್ಲೇವಿಯಾ, ನವಚೇತನ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕಿ ಸಿ| ಮೇರಿ, ಬೆಳ್ತಂಗಡಿ ಶ್ರೀ ಗು.ಸ್ವಾ. ಸೇವಾ ಸಂಘದ ಅಧ್ಯಕ್ಷ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ವೇಣೂರು ಶ್ರೀ ಗು.ಸ್ವಾ. ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಪೂಜಾರಿ, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಪೂಜಾರಿ ಉಪ್ಪಾರು, ಮಹಿಳಾ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷರುಗಳಾದ ತನುಜಾ ಶೇಖರ್, ವಿನೋಧಿನಿ ರಾಮಪ್ಪ, ತಾ.ಪಂ. ಸದಸ್ಯರಾದ ವಿನುಷಾ ಪ್ರಕಾಶ್, ಕೇಶಾವತಿ, ಸುಶೀಲ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಮೂಡಬಿದಿರೆ ಯುವವಾಹಿನಿ ಘಟಕದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ವೇಣೂರು ಯುವ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ನಿತೀಶ್ ಎಚ್., ಉಪಾಧ್ಯಕ್ಷ ಅರುಣ್ ಕೋಟ್ಯಾನ್, ಬೆಳ್ತಂಗಡಿ ಎಪಿಎಂಸಿ ಸದಸ್ಯ ಪಲ್ಲವಿರಾಜು, ಕಾರ್ಯದರ್ಶಿ ಸತೀಶ್ ಪಿ.ಎನ್. ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಯೋಗಾಸನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ನಿವೃತ್ತ ಪದವೀಧರ ಮುಖ್ಯಶಿಕ್ಷಕಿ ಶಶಿಪ್ರಭಾ ಡಿ.ಕೆ. ಅವರನ್ನು ಸನ್ಮಾನಿಸಲಾಯಿತು. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕಲಿಕಾಸಾಮಾಗ್ರಿ ವಿತರಿಸಲಾಯಿತು.
ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಸುಧಾಮಣಿ ರಮಾನಂದ್ ನಿರ್ವಹಿಸಿ, ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಪುಷ್ಪಾವತಿ ನಾವರ ವಂದಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.