HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಓಡಿಲ್ನಾಳ: ಅಂಗನವಾಡಿ ಕೇಂದ್ರದ ಆವರಣಗೋಡೆ & ಸ್ಮಾರ್ಟ್ ಅಂಗನವಾಡಿ ಯೋಜನೆ ಉದ್ಘಾಟನೆ

ಓಡಿಲ್ನಾಳ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ತಾಲೂಕು ಪಂಚಾಯತ್ ಅನುದಾನದಿಂದ ನಿರ್ಮಿಸಿದ ಓಡಿಲ್ನಾಳ ಅಂಗನವಾಡಿ ಕೇಂದ್ರಆವರಣ ಗೋಡೆ ಹಾಗೂ ಸೆಲ್ಕೋ ಪೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಊರ ದಾನಿಗಳ ಸಹಕಾರದೊಂದಿಗೆ ಅನುಷ್ಠಾನಗೊಳಿಸಿದ ಸ್ಮಾರ್ಟ್ ಅಂಗನವಾಡಿ ಯೋಜನೆ ಇದರ ಉದ್ಘಾಟನಾ ಸಮಾರಂಭವು ಮಾ.7 ರಂದು ಜರಗಿತು.
ಆವರಣಗೋಡೆಯ ಉದ್ಘಾಟನೆಯನ್ನು ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್ ಹಾಗೂ ಸ್ಮಾರ್ಟ್ ಅಂಗನವಾಡಿ ಯೋಜನೆ ಉದ್ಘಾಟನೆಯನ್ನು ಈ ಯೋಜನೆಗೆ ಹೆಚ್ಚಿನ ಆರ್ಥಿಕ ನೆರವು ನೀಡಿದ ದಾನಿಗಳಾದ ಓಡಿಲ್ನಾಳ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದತ್ತಾತ್ರೇಯ ಗೊಲ್ಲ ನೆರವೇರಿಸಿ, ಶುಭ ಹಾರೈಸಿದರು.
ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕುವೆಟ್ಟು ಗ್ರಾ.ಪಂ. ಉಪಾಧ್ಯಕ್ಷೆ ಅಕ್ಷತಾ ಕೆ. ಶೆಟ್ಟಿ, ಗ್ರಾ.ಪಂ.ಸದಸ್ಯರಾದ ರುದೇಶ್ ಕುಮಾರ್, ಶ್ರೀಮತಿ ಮಾಲತಿ, ಸೆಲ್ಕೋ ಪೌಂಡೇಶನ್ ಸಂಸ್ಥೆಯ ಜೂನಿಯರ್ ಮೆನೇಜರ್ ಲಿಂಗಪ್ಪ, ರಮ್ಯ, ಸೆಲ್ಕೋ ಬೆಳ್ತಂಗಡಿ ಖಾತೆಯ ಮೆನೇಜರ್ ನವೀನ್, ಕಾರ್ತಿಕ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಮತಿ ಬಿ.ಜೆ, ಸದಸ್ಯರಾದ ಶೇಖರ್ ಶೆಟ್ಟಿ ಉಪ್ಪಡ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಪಡಂಗಡಿ ವಲಯದ ಮೇಲ್ವಿಚಾರಕಿ ನಾಗವೇಣಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಕ್ಕೆ ನೂತನ ಗೇಟ್ ಕೊಡುಗೆಯಾಗಿ ನೀಡಿದ ಟ್ಟೆಮಾರು ಸತೀಶ್ ಪೂಜಾರಿಯವರ ಪರವಾಗಿ ಅವರ ತಂದೆ ವೀರಪ್ಪ ಪೂಜಾರಿ ಹಾಗೂ ಊರ ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜ್ಞಾ ಸ್ತ್ರೀಶಕ್ತಿ ಸಂಘದ ಸದಸ್ಯೆ ನಾಗರತ್ನ ಸ್ವಾಗತಿಸಿ, ಓಡಿಲ್ನಾಳ ಶಾಲಾ ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಧನ್ಯವಾದವಿತ್ತರು. ಅಂಗನವಾಡಿ ಸಹಾಯಕಿ ಶಾಂತಿ, ಆಶಾ ಕಾರ್ಯಕರ್ತೆ ಲಕ್ಷ್ಮೀ, ಸ್ತ್ರೀಶಕ್ತಿ ಸಂಘದ ಸದಸ್ಯೆಯರು, ಊರವರು, ಮಕ್ಕಳ ಪೋಷಕರು, ಪುಟಾಣಿ ಮಕ್ಕಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.