ಕೊರಿಂಜ ಶ್ರಿ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ: ಸಾಧಕರಿಗೆ ಸನ್ಮಾನ

ಕೊರಿಂಜ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ವಿಶೇಷ ಅರ್ಥವನ್ನು ತಂದುಕೊಟ್ಟಿತು.
ವಿಶೇಷವಾಗಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮೆರೆದ ಭೂಶಿತಾ, ಜಾತ್ರಾಮಹೋತ್ಸವದ ಗೌರವಾಧ್ಯಕ್ಷ ದಾಸಪ್ಪ ಗೌಡ ಕೋಡ್ಯಡ್ಕ, ಸುಬ್ರಾಯ ಹೊಳ್ಳ ಇವರನ್ನೂ ಗೌರವಿಸಲಾಯಿತು.
ಸಮಾರಂಭದಲ್ಲಿ ವಾಣಿ ಕಾಲೇಜು ಪ್ರಾಂಶುಪಾಲ ಡಿ ಯದುಪತಿ ಗೌಡ, ಪಡಂಗಡಿ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ನಡಕರ, ಗ್ರಾ. ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ರೈತಬಂಧು ಸಂಸ್ಥೆಯ ಶಿವಶಂಕರ ನಾಯಕ್, ಗಣ್ಯರಾದ ರವಿರಾಜ್, ಸುಬ್ರಾಯ ಹೊಳ್ಳ ಬಂದಾರು, ತಾ.ಪಂ ಸದಸ್ಯೆ ಅಮಿತಾ ಕುಶಾಲಪ್ಪ, ಯೋಗೀಶ್ ಕುಮಾರ್ ಕಡ್ತಿಲ, ಹರೀಶ್ ಕೊಂರ್ಗಿನ್ನಾಯ, ಜಿ.ಪಿ ಶ್ಯಾಮ ಭಟ್ಟ ವಾದ್ಯಕೋಡಿ, ಜನಾರ್ದನ ಗೌಡ ನಾಕಾಲು, ಕೆ ಸೀತಾರಾಮ ಆಳ್ವ, ಶಂಕರ ನಾರಾಯಣ ಭಟ್, ಸೇಸಪ್ಪ ಗೌಡ ಮಜಿಕುಡೇಲು, ಮಾಧವ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.