HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶ್ರಮಯೋಗಿ ಮಾನ್ -ಧನ್ ಯೋಜನೆ: ನೋಂದಾವಣೆಯಲ್ಲಿ ಅನುಗ್ರಹ ಜನಸೇವಾ ಕೇಂದ್ರ ರಾಜ್ಯದಲ್ಲಿ ಪ್ರಥಮ

ಬೆಳ್ತಂಗಡಿ: ಈಗಾಗಲೇ ಭಾರತ ಸರ್ಕಾರ ಮತ್ತು ರಾಜ್ಯದ ಆನ್ಲೈನ್ ಯೋಜನೆಗಳನ್ನು ಅತ್ಯುತ್ತಮವಾಗಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿರುವ ಸಿಎಸ್‌ಸಿ ಸೆಂಟರ್ ಅನುಗ್ರಹ ಜನ ಸೇವಾ ಕೇಂದ್ರ ಬೆಳ್ತಂಗಡಿಯು ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸದಾಗಿ ಜಾರಿಗೆ ತಂದಿರುವ ಅಸಂಘಟಿತ ಕಾರ್ಮಿಕರಿಗೆ ಪೆನ್ಷನ್ ಯೋಜನೆ ಪ್ರಧಾನ್‌ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಯನ್ನು ಅತೀ ಹೆಚ್ಚು ನೋಂದಾವಣೆ ಮಾಡಿ ಸಿಎಸ್‌ಸಿ ಸೆಂಟರ್‌ಗಳ ಪೈಕಿ ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದೆ.
ಕೇಂದ್ರದ ಮುಖ್ಯಸ್ಥರಾದ ತಲ್‌ಹತ್ ಎಂ.ಜಿ ಅವರು ಈ ಕೇಂದ್ರದ ಮೂಲಕ ಸಾಮಾಜಿಕ ಜಾಲತಾಣ ಬಳಸಿ ಅಸಂಘಟಿತ ಕಾರ್ಮಿಕರಿಗೆ ಯೋಜನೆ ಪ್ರಯೋಜನ ಪ್ರಚಾರಪಡಿಸಿದ್ದೂ ಮಾತ್ರವಲ್ಲದೆ ಆನ್ಲೈನ್ ನೋಂದಾವಣಿಯನ್ನೂ ಮಾಡಿ, ಮಾ. 7 ರಂದು ಹೈದರಾಬಾದ್‌ನಲ್ಲಿ ನಡೆಯುವ ಪ್ರಧಾನ ಮಂತ್ರಿಗಳ ಪಿಎಮ್‌ಎಸ್‌ವೈಎಮ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲು ವಿಶೇಷ ಆಹ್ವಾನವನ್ನೂ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.