HomePage_Banner_
HomePage_Banner_
HomePage_Banner_

ಪ್ರತ್ಯೇಕ ಮರಳು ನೀತಿ ಕರಾವಳಿ ಜಿಲ್ಲೆಗೆ ಅಗತ್ಯ: ನಳಿನ್

Advt_NewsUnder_1

ಗುರುವಾಯನಕೆರೆ: ಕರಾವಳಿ ಜಿಲ್ಲೆಗಳಲ್ಲಿ ಹೊಯ್ಗೆ ಅಭಾವದಿಂದಾಗಿ ಕಾಮಗಾರಿಗಳೆಲ್ಲಾ ಸ್ಥಗಿತಗೊಂಡು ಅಭಿವೃದ್ಧಿಗೆ ಭಾರಿ ತೊಡಕಾಗಿದೆ. ಬಡವರ ಮನೆ ರಚನೆಯೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕರಾವಳಿ ಜಿಲ್ಲೆಗಳಿಗಾಗಿಯೇ ಪ್ರತ್ಯೇಕ ಮರಳು ನೀತಿಯನ್ನು ಸರಕಾರ ರೂಪಿಸುವುದು ಅಗತ್ಯ. ಇದನ್ನೂ ಹಕ್ಕೊತ್ತಾಯದಲ್ಲಿ ಸೇರಿಸಬೇಕು ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ನಾಗರಿಕ ಸೇವಾ ಟ್ರಸ್ಟ್ ಕಚೇರಿಯ ಸಭಾಭವನದಲ್ಲಿ ಟ್ರಸ್ಟ್‌ನ ಸಮಾವೇಶದಲ್ಲಿ ಮಂಡಿಸಿದ್ದ 22 ನಿರ್ಣಯ (ಹಕ್ಕೊತ್ತಾಯ)ಗಳಿಗೆ ಸ್ಪಂದಿಸುತ್ತಾ ಇವುಗಳಲ್ಲಿ ಕೇಂದ್ರಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ಈಗಾಗಲೇ ಸ್ಪಂದಿಸಿದ್ದೇವೆ, ಹೋರಾಟವನ್ನೂ ಮಾಡಿದ್ದೇವೆ. ನಮ್ಮ ಮಿತಿಯೊಳಗೆ ಎಲ್ಲದಕ್ಕೂ ಸ್ಪಂದಿಸುತ್ತೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಹಿರಿಯರೊಂದಿಗೆ ಮಾತುಕತೆ ಮಾಡಿ ಸೇರಿಸುತ್ತೇವೆ ಎಂದು ನುಡಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಟ್ರಸ್ಟ್ ಆಶ್ರಯದಲ್ಲಿ ಫೆ.26 ರಂದು ನಡೆದ ಸಮಾವೇಶದ ಉದ್ದೇಶವನ್ನು ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ವಿವರಿಸಿ, ಪ್ರಜೆಗಳೇ ಪ್ರಭುಗಳು, ರಾಜಕೀಯ ಕೆಟ್ಟದೆಂದು ದೂರವಿರಬಾರದು, ಸರಕಾರವೇ, ಸಂವಿಧಾನವೇ ಪರಮೋಚ್ಚ ಎಂಬುದು ಟ್ರಸ್ಟ್‌ನ ಧೋರಣೆ ಎಂದು ಟ್ರಸ್ಟ್‌ನ ಜನರ ಪ್ರಣಾಳಿಕೆ, ಮುಖಾಮುಖಿ ಕಾರ್ಯಾಚರಣೆಗಳ ವಿವರ ನೀಡಿದರು.
ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್ ಸ್ವಾಗತಿಸಿ, ಸಹಕಾರ್ಯದರ್ಶಿ ನಾರಾಯಣ ಕಿಲಂಗೋಡಿ ವಂದಿಸಿದರು. ಉಪಾಧ್ಯಕ್ಷ ಕೆ.ರಮಾನಂದ ಸಾಲಿಯಾನ್ ಮತ್ತು ಸಹಕಾರ್ಯದರ್ಶಿ ವನಿತಾ ಜೈನ್ ವೇದಿಕೆಯಲ್ಲಿದ್ದರು. ಟ್ರಸ್ಟಿಗಳು ಮತ್ತು ತುಳುವೆರೆ ಪರ್ಬದ ಸಂಚಾಲಕರು ಭಾಗವಹಿಸಿದ್ದರು.
ಯುವಜನರಿಗೆ, ಮಹಿಳೆಯರಿಗೆ, ಎಸ್‌ಸಿಎಸ್‌ಟಿಗಳಿಗೆ ಉದ್ಯೋಗ ಒದಗಿಸಲು ಕೇಂದ್ರದ ಮುದ್ರಾ ಯೋಜನೆ, ಕೌಶಲ್ಯಾಭಿವೃದ್ಧಿ ಯೋಜನೆ ಮತ್ತಿತರ ಯೋಜನೆಗಳ ವಿವರ ನೀಡಿ ಉದ್ಯಮಶೀಲತೆ ಬೆಳೆಸಿ ಉದ್ಯೋಗಾ ವಕಾಶವನ್ನು ಸೃಷ್ಠಿಸುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ಥಿತಿ-ಗತಿಯ ಕುರಿತು ಟ್ರಸ್ಟ್‌ನ ಅಧ್ಯಯನ ವರದಿಯನ್ನು ಪರಿಶೀಲಿಸಿ ವಿಶೇಷ ಗಮನ ಕೊಡುವುದಾಗಿ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದರು. ತುಳುವರ ಪರ್ಬದಲ್ಲಿ ಕೈಗೊಂಡ ನಿರ್ಣಯಗಳಿಗೂ ಸ್ಪಂದಿಸಿದ ಸಂಸದರು ತುಳುಭಾಷೆಯನ್ನು ೮ನೇ ಪರಿಚ್ಛೆಧ ದಲ್ಲಿ ಸೇರಿಸಲು ೩ ಬಾರಿ ನಿಯೋಗದೊಂದಿಗೆ ಪ್ರಯತ್ನ ಮಾಡಿರುವೆ ಇದನ್ನು ಗಂಭೀರವಾಗಿ ಮುಂದುವರಿಸುವೆ. ಕಲಾಕಾರರಿಗೆ ಪಿಂಚಣಿ ಮತ್ತಿತರ ನಿರ್ಣಯಗಳಿಗೆ ನನ್ನ ಸಹಮತ ಇದೆ ಎಂದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.