ನ.ಪಂಚಾಯತ್‌ನಿಂದ ಮನೆ-ಮನೆಗೆ ಸ್ವಚ್ಛತಾ ಜಾಥಾ

ಬೆಳ್ತಂಗಡಿ: ಸ್ವಚ್ಛತೆಯಿಂದ ಆರೋಗ್ಯ, ಸ್ವಚ್ಛತೆಯಿಂದ ನೆಮ್ಮದಿ, ಸ್ವಚ್ಛ-ಸುಂದರ ಪರಿಸರ ನಿರ್ಮಾಣದಿಂದ ಮಾತ್ರ ಸುಖ-ಸಂತೋಷದ ಜೀವನ ನಡೆಸಲು ಸಾಧ್ಯ, ಆದ್ದರಿಂದ ಪ್ರತೀಯೋರ್ವ ನಾಗರಿಕನೂ, ನಮ್ಮ ಮನೆ, ನಮ್ಮ ಪರಿಸರ, ನಮ್ಮ ವಠಾರ, ನಮ್ಮ ನಗರವನ್ನು ಸ್ವಚ್ಛವಾಗಿರಿಸಿ, ಸುಂದರ ಬದುಕನ್ನು ರೂಪಿಸಲು ಆದ್ಯ ಗಮನ ನೀಡಬೇಕೆಂದು ಬೆಳ್ತಂಗಡಿ ಪಟ್ಟಣ ಪಂಚಾಯತು ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್‌ರವರು ಕರೆ ನೀಡಿದರು.
ಅವರು ಪಟ್ಟಣ ಪಂಚಾಯತು 1 ನೇ ವಾರ್ಡ್ ಮಟ್ಟದ ಸ್ವಚ್ಛತಾ ಸಮಿತಿಯಿಂದ ಮನೆ-ಮನೆಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ್‌ಪೇಟೆ, ಹಳೆಕೋಟೆ, ಪರಿಸರದ ಎಲ್ಲಾ ಮನೆಗಳಿಗೆ ತೆರಳಿ ಮೂಲದಲ್ಲೇ ಕಸ ವಿಂಗಡಣೆ ಮಾಡುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತೀ ಮನೆಗೂ, ಜಾಗೃತಿ ಸ್ಟಿಕ್ಕರ್ ಅಂಟಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದದಲ್ಲಿ1ನೇ ವಾರ್ಡ್ ಸದಸ್ಯೆ ಹಾಗೂ ಜಾಗೃತಿ ಸಮಿತಿಯ ಅಧ್ಯಕ್ಷೆ ರಾಜಶ್ರೀ ರಮಣ, ಉಸ್ತುವಾರಿ ಸಿಬ್ಬಂದಿ ಮೆಟಿಲ್ಡಾ ಡಿಕೋಸ್ತಾ, ಫ್ರಾನ್ಸಿಸ್ .ಕೆ .ಎ, ಕಿರಿಯ ಅಭಿಯಂತರರಾದ ಮಹಾವೀರ ಆರಿಗ, ಸ್ಯಾನಿಟರಿ ಸೂಪರ್‌ವೈಸರ್ ಲಕ್ಷ್ಮೀ ನಾರಾಯಣ, ಮಾಜಿ ಸದಸ್ಯ ಹರಿದಾಸ್ ನಾಯ್ಕ, ರವೀಂದ್ರ ಭಟ್ ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ವ್ಯಕ್ತಪಡಿಸಿದರು ಮಾಜಿ ನಾಮ ನಿರ್ದೇಶನ ಸದಸ್ಯ ಲ್ಯಾನ್ಸಿ ಎ.ಪಿರೇರಾ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.