ಜಾಗದ ಹಕ್ಕುಪತ್ರಕ್ಕಾಗಿ ಮಲೆಕುಡಿಯ ಸಮುದಾಯದಿಂದ ಮತ್ತೆ ಅರ್ಜಿ ಪಡೆಯಲು ಸರಕಾರಕ್ಕೆ ಮನವಿ

ಬೆಳ್ತಂಗಡಿ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲೆಕುಡಿಯ ಸಮುದಾಯದ ಅರಣ್ಯ ಹಕ್ಕು ಅರ್ಜಿಗಳನ್ನು ಪುನಃ ತೆಗೆದುಕೊಂಡಲ್ಲಿ ತಕ್ಷಣ ಹಕ್ಕು ಪತ್ರ ನೀಡುವರೇ ಕ್ರಮ ತೆಗೆದುಕೊಳ್ಳುವ ಕುರಿರು ರಾಜ್ಯ ಮಲೆಕುಡಿಯ ಸಂಘ ಮನವಿ ಮಾಡಿದೆ.

ಪ್ರ. ಕಾರ್ಯದರ್ಶಿ ಶ್ರೀಧರ ಗೌಡ ಈದು ಅವರು ಬರೆದಿರುವ ಪತ್ರದಲ್ಲಿ, ಮಲೆಕುಡಿಯ ಸಮುದಾಯದ ನಮ್ಮನ್ನು ಬುಡಕಟ್ಟು ಸಮುದಾಯವೆಂದು, ಮೂಲ ಆದಿವಾಸಿ ಸಮುದಾಯವೆಂದು, ಸೂಕ್ಷ್ಮ ಬುಡಕಟ್ಟು ಸಮುದಾಯವೆಂದು ಘೋಷಿಸಿದೆ.

ನಮ್ಮ ಜನಾಂಗವು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ, ಗಿರಿಕಂದರಗಳಲ್ಲಿ ತಲಾತಲಾಂತರಗಳಿಂದ ವಾಸಮಾಡಿಕೊಂಡು ಬಂದಿದ್ದೇವೆ. ಆದರೆ ಅಧಿಕಾರಿಗಳ ಉದಾಸಿನತೆ ಮತ್ತು ಅರಣ್ಯ ಇಲಾಖೆಯ ವಿರೋಧದಿಂದ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಬಹಳ ನಿಧಾನವಾಗಿ ನಡೆದಿದೆ. ಮುಂದಿನ ಜುಲೈ 24 ರೊಳಗೆ ಅರ್ಜಿ ನೀಡದವರನ್ನು ಮತ್ತು ತಿರಸ್ಕೃತಗೊಂಡವರನ್ನು ಅರಣ್ಯ ಪ್ರದೇಶದಿಂದ ಹೊರಹಾಕುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಆದ್ದರಿಂದ ಕರ್ನಾಟಕ ಸರಕಾರವು ಈ ವಿಷಯಕ್ಕೆ ತಕ್ಷಣ ಗಮನ ಹರಿಸಿ ಮುಂದಿನ 4 ತಿಂಗಳೊಳಗೆ ನಮ್ಮ ಸಮುದಾಯದ ಅರ್ಜಿ ತಿರಸ್ಕೃತರಾದವರಿಂದ ಪುನಃ ಅರ್ಜಿ ಪಡೆದು ಅರ್ಹತೆಯಂತೆ ಹಕ್ಕುಪತ್ರ ನೀಡಬೇಕು. ಹಾಗೆಯೇ ಇನ್ನೂ ಅರ್ಜಿ ನೀಡದಿರುವ ಕುಟುಂಬಗಳಿಂದ ಹೊಸದಾಗಿ ಗ್ರಾಮಸಭೆ ನಡೆಸಿ ಅರ್ಜಿ ಪಡೆದು ಹಕ್ಕು ಪತ್ರ ನೀಡುವರೇ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಭಿನ್ನವಿಸಿಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.