HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗೇರುಕಟ್ಟೆ ನೂತನ ಎನ್‌.ಎಸ್‌.ಎಸ್ ಘಟಕ ಉದ್ಘಾಟನೆ

ಗೇರುಕಟ್ಟೆ: ಸರಕಾರದ ಆದೇಶ ಮತ್ತು ನಿರ್ದೇಶನದಂತೆ ಪ್ರೌಢ ಶಾಲೆಗಳಲ್ಲಿ ಎನ್‌.ಎಸ್‌.ಎಸ್‌ ಆರಂಭಿಸುವಂತೆ ತಾಲೂಕಿನಲ್ಲಿ 2 ಪ್ರೌಢ ಶಾಲೆಗಳನ್ನು ಆಯ್ಕೆ ಮಾಡಿದ್ದು, ಸರಕಾರಿ ಪ. ಪೂ ಕಾಲೇಜು ಪ್ರೌಢ ಶಾಲಾ ವಿಭಾಗ ಗೇರುಕಟ್ಟೆಯ ಎನ್‌ಎಸ್‌ಎಸ್ ಘಟಕವನ್ನು ಸಂಸ್ಥೆಯ ಉಪಪ್ರಾಂಶುಪಾಲ ಕೆ.ಜಿ ಲಕ್ಷ್ಮಣ ಶೆಟ್ಟಿ ಉದ್ಘಾಟಿಸಿದರು. ಸದೃಢ ಸಮಾಜ ನಿರ್ಮಾಣದಲ್ಲಿ ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿ ನಿಸ್ವಾರ್ಥ ಸೇವೆಯೇ ದೇಶ ನಿರ್ಮಾಣದಲ್ಲಿ ಪ್ರಮುಖ ಮಹತ್ವ ಪಡೆಯುತ್ತದೆ ಎಂದು ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ವಹಿಸಿದ್ದರು. ಸಂಘಟನೆ ಮತ್ತು ಸಾಮರಸ್ಯಕ್ಕೆಎನ್‌.ಎಸ್‌.ಎಸ್‌ ನಂತಹಾ ಕಾರ್ಯಕ್ರಮ ಮಾದರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ರತ್ನಾಕರ ಪೂಜಾರಿ ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಉಪಸ್ಥಿತರಿದ್ದರು.
ಸಂಸ್ಥೆಯ ಹಿರಿಯ ಸಹಶಿಕ್ಷಕ ರಾಜೇಂದ್ರಕೃಷ್ಣ ಸ್ವಾಗತಿಸಿದರು. ಗಣಿತ ಶಿಕ್ಷಕ ಸತೀಶ್ ಬಂಗೇರ ಧನ್ಯವಾದವಿತ್ತರು .ಎನ್‌.ಎಸ್‌.ಎಸ್‌  ಕಾರ್ಯಕ್ರಮಾಧಿಕಾರಿ ಅಜಿತ್ ಕುಮಾರ್ ಕೊಕ್ರಾಡಿ ನಿರ್ವಹಿಸಿದರು.
ಶಿಕ್ಷಕರುಗಳಾದ ಮಮತಾ, ಜ್ಯೋತಿ, ಕಿಶೋರಿ, ವಿಜಯಾ, ಲಕ್ಷ್ಮೀಪತಿ, ಶಿವಶಂಕರ್ ಮತ್ತು ಶೀಲಾ ಸಹಕರಿಸಿದರು

ಚಿತ್ರ, ವರದಿ: ಅಜಿತ್ ಕುಮಾರ್ ಕೊಕ್ರಾಡಿ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.