ಗೇರುಕಟ್ಟೆ ಪ್ರೆಂಡ್ಸ್ ಕ್ರೀಡಾ ಸಂಘದಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1
ಕಳಿಯ ಪಂಚಾಯತ್ ವ್ಯಾಪ್ತಿಯ ಎರಡು ಬಡ ಕುಟುಂಬಗಳಿಗೆ ತಲಾ 4000 ಸಹಾಯ ಧನವನ್ನು  ಹಸ್ತಾಂತರಿಸಲಾಯಿತು.

 

ಗೇರುಕಟ್ಟೆ : ಕಳಿಯ ಗ್ರಾಮದ ಗೇರುಕಟ್ಟೆ ಕ್ರೀಡಾ ಸಂಘದ ಸದಸ್ಯರು ಆಯೋಜಿಸಿದ ಜಿ ವಿ ಎಲ್ ಸೀಜನ್ 1-2017 ಹಾಗೂ ಸೀಜನ್ 2-2019 ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ಸ್ಥಳೀಯ ಅಂಗನವಾಡಿ ಕೇಂದ್ರದ ನಿವೃತ್ತ ಸಹಾಯಕಿ  ಜಯಂತಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಪಂದ್ಯಾವಳಿಯ ಉಳಿಕೆ ಹಣವನ್ನು ಕಳಿಯ ಪಂಚಾಯತ್ ವ್ಯಾಪ್ತಿಯ ಅನಾರೋಗ್ಯ ಪೀಡಿತ ವಾಲಿಬಾಲ್ ಆಟಗಾರರಿಗೆ 11,500 ರೂಪಾಯಿ ಹಾಗೂ ಜಿ.ವಿ.ಎಲ್ :2 -2019 ರಲ್ಲಿ ಉಳಿಕೆ 8000 ರೂಪಾಯಿ ಹಣವನ್ನು ಕಳಿಯ ಪಂಚಾಯತ್ ವ್ಯಾಪ್ತಿಯ ಎರಡು ಬಡ ಕುಟುಂಬಗಳಿಗೆ ತಲಾ 4000 ಸಹಾಯ ಧನವನ್ನು  ಹಸ್ತಾಂತರಿಸಲಾಯಿತು.

 ಈ ಸಂದರ್ಭದಲ್ಲಿ ಗೇರುಕಟ್ಟೆ ಕ್ರೀಡಾ ಸಂಘಟಕರಾದ ರಂಜನ್ ಹೆಚ್, ಹಮೀದ್ ಜಿ ಡಿ, ರಾಜೇಶ್ ಗೇರುಕಟ್ಟೆ, ಮನ್ಸೂರ್ ಜಿ ಎ, ಅಶೋಕ್ ಗೇರುಕಟ್ಟೆ ,ಅಬ್ದುಲ್ ಅಜಿದ್ ಜಿ, ಸುದೇಶ್ , ಹನೀಫ್ ಜಿ , ರೋಹಿತ್ ಭಟ್, ಅನ್ವರ್ ಸುಣ್ಣಲಡ್ಡ ಮತ್ತು ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.