ಮಹಿಳಾ ಮಂಡಲಗಳ ಒಕ್ಕೂಟದಿಂದ ಧನಂಜಯ ಕುಮಾರ್‌ಗೆ ನುಡಿನಮನ

ಬೆಳ್ತಂಗಡಿ: ತಾ.ಮಹಿಳಾ ಮಂಡಲಗಳ ಒಕ್ಕೂಟದಿಂದ ಆಯೋಜಿಸಿದ್ದ ರಾಜಸ್ತಾನ ಪ್ರವಾಸ ಸಂದರ್ಭದಲ್ಲಿ ಜೈಸಲ್ಮೇರ್ ಸ್ಯಾಮ್ ಮರುಭೂಮಿಯಲ್ಲಿ ಪ್ರವಾಸ ಮುಂದುವರೆಸಿದ್ದ ಸಂದರ್ಭ ಮಾಜಿ ಕೇಂದ್ರ ಸಚಿವರೂ, ಹಾಗೂ ಜಿಲ್ಲೆಯ ಮಾಜಿ ಸಂಸದರೂ ಆದ ಧನಂಜಯ ಕುಮಾರ್‌ಅವರ ಮರಣದ ವಾರ್ತೆ ತಿಳಿದು ಅಲ್ಲೇ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಶಾಂತಾ ಜೆ ಬಂಗೇರ, ಕಾರ್ಯದರ್ಶಿ ಆರತಿ ಹೆಬ್ಬಾರ್, ಉಪಾಧ್ಯಕ್ಷೆ ಸವಿತಾ ಜಯದೇವ್, ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ, ಕೆಪಿಸಿಸಿ ಸದಸ್ಯ ಪೀತಾಂಬರ ಹೇರಾಜೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ಬಿ.ಜೆ.ಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಶಶಿಧರ ಎಂ ಕಲ್ಮಂಜ, ತಾ.ಪಂ ಸದಸ್ಯೆ ಕೇಶವತಿ, ಸುಳ್ಯ ತಾ. ಎಪಿಎಂಸಿ ಮಾಜಿ ಸದಸ್ಯೆ ಡಿ.ಪಿ ಶಶಿಕಲ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ದಮಯಂತಿ ಕೂಜುಗೋಡು, ಬೆ.ತಾ.ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯರಾಮ ಬಂಗೇರ, ವಿಜಯ ಬ್ಯಾಂಕ್ ನಿವೃತ್ತ ಮೆನೇಜರ್ ಶೇಖರ ಬಂಗೇರ, ನಿವೃತ್ತ ಶಿಕ್ಷಕಿ ಜಯಮ್ಮ ಚಟ್ಟಿಮಾಡ, ಜಿ. ಪ್ರಭಾವತಿ, ಪ್ರೇಮಾ ಕೈಂಗೋಡಿ, ಅಂಬಾಬಾಯಿ, ಕಮಲಾನಂದ ಕೊಕ್ಕಡ, ಶೋಭಾಮಾಧವ, ಯಶೋಧಾ ಪೂಂಜ, ಮೋಹಿನಿ ಶೆಟ್ಟಿ, ಲೋಲಾಕ್ಷಿ ಬಂಗೇರ, ಭವಾನಿ ಸಾಲ್ಯಾನ್, ಕಾವೇರಮ್ಮ ಬಿ, ಸುತ ಅಶೋಕ್ ಕುಮಾರ್, ಲೀಲಾವತಿ ದೇವರಾಜ್, ಪುಷ್ಪಾ ಪೂಬಾಡಿ, ದೀಪಾ ಕೋಟ್ಯಾನ್, ಉಷಾ ಕೂಜುಗೋಡು, ಪದ್ಮಲತಾ, ದಯಪದ್ಮಲತಾ ಕಿಶೋರ್‌ಕುಮಾರ್, ಪುಷ್ಪಲತಾ ಕೂಜುಗೋಡು, ಪುಷ್ಪಾ ಚೀಮುಳ್ಳು, ಸುಚಿತ್ರಾ ಕೊಲ್ಲಾಜೆ, ಉದಯಕುಮಾರ್ ಕೂಜುಗೋಡು, ಇಂದುಮತಿ ಜಾಕೆ, ಲೀಲಾ ಮಾಧವ ಜಾಕೆ, ಭರತ್ ರಾಜ್ ವಳಂಬ್ರ, ಟೂರ್ ಮೆನೇಜರ್ ಯಶವಂತ್ ಅಗರಿ, ಸಹ ಮೆನೇಜರ್ ಗಣೇಶ್ ಗಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.