ಶ್ರೀ ಸದಾಶಿವ ದೇವಸ್ಥಾನ ಕೂಡಬೆಟ್ಟು: ಓಂಕಾರ ಭಜನಾ ತಂಡದಿಂದ ಭಜನೆ

ಮಿತ್ತಬಾಗಿಲು: ಮಹಾಶಿವರಾತ್ರಿ ಪ್ರಯುಕ್ತ ಕೂಡಬೆಟ್ಟು ಸದಾಶಿವ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳು ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಭಾರತೀತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಯವರ ಪರಮಾನುಗ್ರಹದೊಂದಿಗೆ ಮಾ.4ರಂದು ಜರುಗಿತು. ಕಾರ್ಯಕ್ರಮದಲ್ಲಿ ಕೂಡಬೆಟ್ಟು ಉತ್ಸವ ಸಮಿತಿ ಅಧ್ಯಕ್ಷ ಹೆಚ್.ವಾಸುದೇವ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಕೀಲ ಬಿ.ಕೆ ಧನಂಜಯ ರಾವ್ ಉಪಸ್ಥಿತರಿದ್ದರು.
ಮಾ.೪ ರಂದು ಬೆಳಿಗ್ಗೆ ಪಂಶವಿಂಶತಿ ಕಲಶ ಸ್ಥಾಪನೆ, ಗಣಹೋಮ, ಅಧಿವಾಸ ಹೋಮ, ರುದ್ರಾಭಿಷೇಕ, ಪಂಚವಿಂಶತಿ ಕಲಶಾಬಿಷೇಕ, ಮಹಾಪೂಜೆ, ವಿಜಯವಲ್ಲಿ ರಾಜಶೇಖರ್ ಇವರ ಸೇವಾ ರೂಪವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಉತ್ಸವ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಫಲಾಹಾರ, ಏಕಾದಶ ರುದ್ರಾಭಿಷೇಕ ನಿತ್ಯಪೂಜೆ, ಸಂಜೆ ಮಹಾಶಿವರಾತ್ರಿ ಪ್ರಯುಕ್ತ ಧಾರ್ಮಿಕ ವಿಧಿ, ಸಾಂಸ್ಕೃತಿಕ ಕಾರ್ಯಕ್ರಮ,  ಕಕ್ಕೆನೇಜಿ ವಾಸುದೇವ ರಾವ್ ರವರ ನೇತೃತ್ವದಲ್ಲಿ ಓಂಕಾರ ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ನೀಡಿದರು.
ಸಾಂಸ್ಕ್ರತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು ನಂತರ ಮಾತನಾಡಿ ಕೂಡಬೆಟ್ಟು ದೇವಸ್ಥಾನ ಬಹಳ ಸುಂದರವಾದ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಈ ದೇವಸ್ಥಾನಕ್ಕೆ ಸರ್ವಋತು ರಸ್ತೆ ಇಲ್ಲದಿರುವುದು ಬಹಳ ಬೇಸರದ ಸಂಗತಿ ಎಂದರು. ಹಳ್ಳಿ ಹಳ್ಳಿ ರಸ್ತೆಗಳು ಅಭಿವೃದ್ಧಿಯಾಗಿದ್ದರೆ ಕೂಡಬೆಟ್ಟು ಭಾಗಕ್ಕೆ ನದಿಗೆ ಸೇತುವೆ ಇಲ್ಲಾ, ಈ ಭಾಗದ ಜನರು,ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನು ನೋಡಿದಾಗ ಯಾಕೆ ಈ ಭಾಗಕ್ಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿ, ಇಲ್ಲಿಗೆ ಸರ್ವಋತು ರಸ್ತೆಯೊಂದು ಆದಷ್ಟು ಬೇಗ ಆಗಲಿ ಎಂದು ಹೇಳಿದರು. , ದೈವಗಳಿಗೆ ಪರ್ವ ಭಂಡಾರ ತೆಗೆಯುವುದು, ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಂತರ ಮಹಾರಂಗಪೂಜೆ, ಬಲಿ, ಮಂತ್ರಾಕ್ಷತೆ, ಪಿಲಿಚಾಮುಂಡಿ, ಕಲ್ಕುಡ ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.