ಮದರಸ ವಿದ್ಯಾರ್ಥಿಗೆ ಗಾಯ: ಆಸ್ಪತ್ರೆಗೆ ದಾಖಲು

ಮಿತ್ತಬಾಗಿಲು: ಕಾಜೂರು ದರ್ಗಾ ಶರೀಫ್ ವತಿಯಿಂದ ನಡೆಸುವ ದರ್ಸ್‌ನ ವಿದ್ಯಾರ್ಥಿ, ಸಾಗದರ ಅಝರುದ್ದೀನ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ. ಹಾಸ್ಟೆಲ್‌ನಲ್ಲಿದ್ದು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಣ್ಣ ವಿಚಾರಕ್ಕೆ ಒಬ್ಬರನೊಬ್ಬರು ತಮಾಷೆ ಮಾಡಿಕೊಂಡಿದ್ದಕ್ಕೆ ಉಪ್ಪಿನಂಗಡಿ ಕರಾಯದ ವಿದ್ಯಾರ್ಥಿ ಈ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದೆಂದು ಪ್ರಚಾರವಾಗಿದೆ.
ರಕ್ತ ವಾಂತಿ ಮಾಡಿಕೊಂಡ ವಿದ್ಯಾರ್ಥಿಯನ್ನು ತಕ್ಷಣ ಗುರುಗಳು ಮತ್ತು ಆಡಳಿತಾಧಿಕಾರಿಗಳು ಉಜಿರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪ್ರಸ್ತುತ ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿ ಸಂಗಡಿಗ ವಿದ್ಯಾರ್ಥಿಯ ಜತೆ ಇರುವಾಗ ಜಾರಿ ಬಿದ್ದದ್ದೆಂದು ಆಸ್ಪತ್ರೆಗೆ ಮಾಹಿತಿ ನೀಡಲಾಗಿದೆ.
ಈ ಪ್ರಕರಣ ಬಗ್ಗೆ ಆಡಳಿತಾಧಿಕಾರಿ ಮುಹಮ್ಮದ್ ರಫಿ ಅವರನ್ನು ವಿಚಾರಿಸಿದಾಗ, ಹಲ್ಲೆ ಘಟನೆ ನಡೆದಿಲ್ಲ. ವಿದ್ಯಾರ್ಥಿ ಬಿದ್ದು ರಕ್ತ ವಾಂತಿ ಮಾಡಿಕೊಂಡ ಬಗ್ಗೆ ತಿಳಿದು ತಕ್ಷಣ ಅಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಮನೆಯವರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಯನ್ನು ವೈದ್ಯರು ಪರೀಕ್ಷಿಸಿ ದೇಹದಲ್ಲಿ ಎಲ್ಲೂ ಗಾಯದ ಗುರುತು ಇಲ್ಲ. ಅವರಿಗೆ ಅಲ್ಸರ್ ಆಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆಂದು ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.