ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಪೋಕ್ಸೋ ಕಾಯ್ದೆಯಡಿ ಬಂಧನ

ಬಳೆಂಜ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಮನೆ ನಿವಾಸಿ ಅಶೋಕ್ ಆಚಾರ್ಯ (31  ವ.) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಇದೇ ಗ್ರಾಮದ ಕೊಂಗಲುಮಜಲು ನಿವಾಸಿನಿ, ಅಪ್ರಾಪ್ತ ಬಾಲಕಿ ನೀಡಿದ ದೂರಿನಂತೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿಯ ತಂದೆಯ ಜಾಗದ ತಕರಾರಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಆಶೋಕ್ ಆಚಾರ್ಯ ಸರಿಪಡಿಸುತ್ತೇನೆ ಎಂದು ಹೇಳಿದ್ದು ಈ ಕಾರಣದಿಂದ ಅವರ ಮನೆಯವರ ಸಹಜವಾಗಿ ಜೊತೆ ಅನ್ಯೋನ್ಯತೆಯಿಂದ ನಡೆದುಕೊಳ್ಳುತ್ತಿದ್ದರು.
ಇದೇ ಸಂಬಂಧವನ್ನು ದುರುಪಯೋಗಪಡಿಸಿಕೊಂಡ ಆರೋಪಿಯು ಶಾಲಾ ರಜಾ ಸಮಯ ತನ್ನ ಕಚೇರಿಗೆ ಓದಲು ಬರುವಂತೆ ಹೇಳಿ ಅಲ್ಲಿ ಬಾಲಕಿಗೆ ಕಳೆದ ಜು. 9 ರಂದು ಮೈಕೈ ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದರು. ವಿಚಾರ ಬಹಿರಂಗಪಡಿಸಿದರೆ ಮಾಧ್ಯಮದಲ್ಲಿ ವರದಿ ಹಾಕಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆಯನ್ನೂ ಒಡ್ಡಿದ್ದರು. ಇದಾದ ಬಳಿಕ ಆಕೆ ಕಚೇರಿಗೆ ಹೋಗುವುದನ್ನು ನಿಲ್ಲಿಸಿದಾಗ ಇತ್ತೀಚೆಗೆ ಜ. 21 ರಂದು ಬಾಲಕಿ ಪುಂಜಾಲಕಟ್ಟೆ ಕಾಲೇಜಿಗೆ ಹೋಗುವ ಬಸ್ಸಿನ ಬದಲು ಆಕೆಯನ್ನು  ಗುರುವಾಯನಕೆರೆಯಿಂದ ಜೊತೆ ಕರೆದು ರಿಕ್ಷಾದಲ್ಲಿ ಕುಳ್ಳಿರಿಸಿ ಪುಂಜಾಲಕಟ್ಟೆವರೆಗೆ ಹೋಗಿದ್ದು ಈ ವೇಳೆ ಕೂಡ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.