ಬೆಳಾಲು ಅನಂತೋಡಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

ಬೆಳಾಲು: ಇಲ್ಲಿಯ ಅನಂತೋಡಿಯಲ್ಲಿ ಜೀರ್ಣೋದ್ಧಾರಗೊಂಡು ಮೇ.11 ರಿಂದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ| ಡಿ ವೀರೇಂದ್ರ ಹೆಗ್ಗಡೆಯವರು ನೀಡಿರುವ ರೂ.10 ಲಕ್ಷ ದೇಣಿಗೆಯನ್ನು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾ.2 ರಂದು ಆಗಮಿಸಿ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.
ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಪ್ರಸಾದ ರೂಪವಾಗಿ ಈ ದೇಣಿಗೆಯನ್ನು ಹೆಗ್ಗಡೆಯವರು ಕಳುಹಿಸಿಕೊಟ್ಟಿದ್ದು, ನನ್ನ ಮೂಲಕ ನೀಡಲು ತಿಳಿಸಿದ್ದಾರೆ ಎಂದರು. ಅನಂತರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ಸೂಚನೆಗಳನ್ನು ನೀಡಿದರು. ಜೀರ್ಣೋದ್ಧಾರದ ಅಂಗವಾಗಿ ಈಗಾಗಲೇ ಕ್ಷೇತ್ರದಿಂದ ರೂ.5 ಲಕ್ಷ ದೇಣಿಗೆ ಕೊಟ್ಟಿದ್ದು, ಒಟ್ಟು ರೂ.15 ಲಕ್ಷ ದೇಣಿಗೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಆನಂದ ಆಚಾರ್ಯ, ಕಾರ್ಯಾಧ್ಯಕ್ಷ ಜತ್ತಣ್ಣ ಗೌಡ, ತಿಮ್ಮಪ್ಪ ಗೌಡ ಬನಂದೂರು, ಮೊಕ್ತೇಸರರಾದ ಜೀವಂಧರ ಕುಮರ್, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ದುರ್ಗಾಪ್ರಸಾದ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಬಾರಿತ್ತಾಯ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕಿ ಅಶ್ವಿತಾ, ಸೇವಾ ಪ್ರತಿನಿಧಿ ಕು| ಆಶಾ, ಕೊಲ್ಪಾಡಿ ಒಕ್ಕೂಟದ ಅಧ್ಯಕ್ಷ ಯೋಗೀಶ್ ಗೌಡ ಎಸ್, ಮಾಯಾ ಒಕ್ಕೂಟದ ಅಧ್ಯಕ್ಷ ಶಿವಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಉದಿತ್ ಕುಮಾರ್ ಜೈನ್, ಮೇಲ್ವಿಚಾರಕ ಗಿರೀಶ್, ಸಮಿತಿಯ ಪ್ರಮುಖರಾದ ಬಾಬು ಗೌಡ ಅಲೆಕ್ಕಿದಡ್ಡ, ದೇಜಪ್ಪ ಗೌಡ ಎಳ್ಳುಗದ್ದೆ, ಲಿಂಗಪ್ಪ ಪೂಜಾರಿ ಬನಂದೂರು, ದಿನೇಶ್ ಪೂಜಾರಿ ಉಪ್ಪಾರು, ಮೋಹನ ಗೌಡ ಏರ್ದೊಟ್ಟು, ಯಶವಂತ ಬನಂದೂರು, ಶ್ರೀನಿವಾಸ ಗೌಡ ಬನಂದೂರು, ಶ್ರೀಮತಿ ವಿದ್ಯಾ ಶ್ರೀನಿವಾಸ್, ದೇಜಪ್ಪ ಗೌಡ ಅರಣೆಮಾರು, ಸದಾಶಿವ ಒಡಿಪ್ರೊಟ್ಟು, ಸತೀಶ್ ಎಳ್ಳುಗದ್ದೆ, ಗುರುರಾಜ್ ಒಡಿಪ್ರೊಟ್ಟು, ನಾರಾಯಣ ಗೌಡ ಎಳ್ಳುಗದ್ದೆ, ಜಾರಪ್ಪ ಗೌಡ ಅರಣೆಮಾರು. ಶ್ರೀಮತಿ ಸರೋಜಿನಿ ಭೀಮಂಡೆ, ಗಣೇಶ್ ಒಡಿಪ್ರೊಟ್ಟು, ರಾಜೇಶ್ ಪಾರಳ, ಕೆ.ಶಿವಪ್ರಸಾದ ಬೆಳಾಲು, ಹರೀಶ್ ಮುಂಡತ್ಯಾರಡ್ಡ, ನೀಲಯ ಗೌಡ ಭೀಮಂಡೆ ಮೊದಲಾದರು ಹಾಜರಿದ್ದರು.
ಶ್ರೀ.ಧ.ಮಂ.ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.