ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಕೆಎಸ್‌ಆರ್‌ಟಿಸಿ ಚಾಲಕ ವಸಂತ ಬಂಗೇರರಿಗೆ ವಯೋನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1984 ರಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ಸುದೀರ್ಘ ಸೇವೆಯೊಂದಿಗೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ವಸಂತ ಬಂಗೇರ ಅವರಿಗೆ ಫೆ. 28 ರಂದು ವಯೋನಿವೃತಿಯಾಗಿದೆ.
ಮೂಲತಃ ಬಂಟ್ವಾಳ ತಾ| ಉಳಿ ಕಕ್ಕೆಪದವು ನಿವಾಸಿಯಾಗಿರುವ ಅವರು ಪ್ರಸ್ತುತ ಉಜಿರೆಯಲ್ಲಿ ನೆಲೆಸಿದ್ದಾರೆ.
ಶಾಲಾ ಅವಧಿಯಲ್ಲೆ ಉತ್ತಮ ಕ್ರೀಡಾಪಟುವಾಗಿದ್ದ ಅವರು ಬಳಿಕ 1984 ರಲ್ಲಿ ಕೆಎಸ್‌ಆರ್‌ಟಿಸಿಗೆ ಸೇರ್ಪಡೆಗೊಂಡಿದ್ದರು. ಚಿಕ್ಕಬಳ್ಳಾಪುರ, ಧರ್ಮಸ್ಥಳ ಘಟಕಗಳಲ್ಲಿ ಸೇವೆ ಸಲ್ಲಿಸಿ ಹಿರಿಯ ಚಾಲಕ ಪದೋನ್ನತಿಯನ್ನೂ ಪಡೆದುಕೊಂಡಿದ್ದರು. ಉತ್ತಮ ಕೆಲಸಕ್ಕಾಗಿ 1994 ರಲ್ಲಿ ವಿಭಾಗದ ಪ್ರಶಸ್ತಿ, 1995 ರಲ್ಲಿ ಬೆಳ್ಳಿಪದಕ, ಉತ್ತಮ ಚಾಲಕ ಮತ್ತು ವಾಹನ ನಿರ್ವಹಣೆಗಾಗಿ ಟಾಟಾ ಕಂಪೆನಿಯಿಂದ 2003 ರಲ್ಲಿ ಪ್ರಶಸ್ತಿ, 2014ರಲ್ಲಿ ಉತ್ತಮ ಕಾರ್ಮಿಕ ಪ್ರಶಂಸನಾ ಪತ್ರ, 2017 ರಲ್ಲಿ ಇಲಾಖೆಯಿಂದ ಅಭಿನಂದನಾ ಪತ್ರ ಮತ್ತು 2018 ರಲ್ಲಿ ಚಿನ್ನದ ಪದಕದೊಂದಿಗೆ ಪುರಸ್ಕೃತರಾಗಿದ್ದರು. ಬಿಳಿಗಿರಿರಂಗನಬೆಟ್ಟ, ಚಿಕ್ಕಬಳ್ಳಾಪುರ, ಹೊಸಪೇಟೆ ಇಲ್ಲೆಲ್ಲಾ ಮಾರ್ಗದಲ್ಲಿ ಕೆಲಸ ಮಾಡಿ, ನಿವೃತಿಯ ಕೊನೆಗೆ ಬೆಳಾಲು, ದಿಡುಪೆ, ನೆರಿಯ, ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರಳ ಸಜ್ಜನಿಕೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಕರ್ತವ್ಯದ ಅವಧಿಯಲ್ಲಿ ಅನೇಕ ಬಾರಿ ಅವರು ಪ್ರಾಮಾಣಿಕತೆ ಮೆರೆದಿದ್ದು, ಪ್ರಯಾಣಿಕರು ಮರೆತುಬಿಟ್ಟುಹೋಗುತ್ತಿದ್ದ ಬೆಲೆಬಾಳುವ ಸೊತ್ತುಗಳನ್ನು ಅವರಿಗೆ ತಲುಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.