HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮುಂಡಾಜೆಯಲ್ಲಿ ಸ್ನೇಹಕೂಟ: ಅಡಿಕೆ ಕೊಯಿಲು ನಡೆಸುವವರಿಗೆ ವಿಶೇಷ ಸನ್ಮಾನ

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮೋಹನ್‌ಚಂದ್ರ ಗೋಖಲೆ ಮತ್ತು ಗ್ರಾ.ಪಂ ಸದಸ್ಯೆ ಸುಮನಾ ಗೋಖಲೆ ದಂಪತಿ ಪ್ರಾಯೋಜಕತ್ವದಲ್ಲಿ ಅವರ ಮನೆಯಲ್ಲಿ ನಡೆದ ವಿಶೇಷ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಆ ಪರಿಸರದ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ಮತ್ತು ಕೊಯಿಲು ಕಷ್ಟದ ಕೆಲಸ ನಿರ್ವಹಿಸುತ್ತಿರುವ ನಾಲ್ವರಿಗೆ ಸನ್ಮಾನ ನೆರವೇರಿಸುವ ಮೂಲಕ ಕರ್ತವ್ಯಕ್ಕೆ ಗೌರವ ನೀಡುವ ವಿನೂತನ ಕಾರ್ಯಕ್ರಮ ನಡೆಯಿತು.
ಶ್ರಮಿಕ ಕಾರ್ಮಿಕರಾದ ಐತ, ಪುರುಷೋತ್ತಮ, ನಾರಾಯಣ ಮತ್ತು ಸುರೇಶ್ ಅವರಿಗೆ ಈ ಸನ್ಮಾನ ನಡೆಯಿತು.
ಸಮಾರಂಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಉಪಾಧ್ಯಕ್ಷ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್, ನಿರ್ದೇಶಕರುಗಳಾದ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಗೋವಿಂದ ಚಿಪ್ಲೂಂಕರ್, ಮಿನಿ ಬೇಬಿ, ಜ್ಯೋತಿ ಜೆ ಫಡಕೆ, ಲಿಂಗಪ್ಪ, ಸಿಇಒ ನಾರಾಯಣ ಫಡಕೆ, ಮತ್ತು ಎಲ್ಲಾ ಶಾಖೆಗಳ ಮೆನೇಜರ್ ಮತ್ತು ಸಿಬಂದಿಗಳು, ಗ್ರಾಪಂ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷೆ ವಸಂತಿ, ಸದಸ್ಯರುಗಳಾದ ಗಣೇಶ್ ಬಂಗೇರ, ಚೆನ್ನಕೇಶವ ನಾಯ್ಕ, ಸುರೇಶ್ ಹೆಗ್ಡೆ, ನಾರಾಯಣ ಗೌಡ ದೇವಸ್ಯ, ಅಶ್ವಿನಿ ಎ ಹೆಬ್ಬಾರ್, ಕಾರ್ಯದರ್ಶಿ ಸಂಜೀವ ನಾಯ್ಕ ಮತ್ತು ಎಲ್ಲಾ ಸಿಬಂದಿಗಳು ಭಾಗಿಯಾಗಿದ್ದರು. ಎಲ್ಲರನ್ನು ಬರಮಾಡಿಕೊಂಡ ಕಾರ್ಯಕ್ರಮ ಆಯೋಜಕರಾದ ಮೋಹನ್‌ಚಂದ್ರ ಗೋಖಲೆ, ಸುಮನಾ ಗೋಖಲೆ ಮತ್ತು ಪುತ್ರಿ ಮಧುರಾ ಗೋಖಲೆ ಇವರು ಆತ್ಮೀಯ ಆತಿಥ್ಯ ನೀಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.