ದರ್ಭೆಕಡ್ಕ ಶ್ರೀ ಕ್ಷೇತ್ರದಲ್ಲಿ ಬ್ರಾಹ್ಮಣ ಪರಿಷತ್ ಕೊಕ್ಕಡ ವಲಯ ಸಮಿತಿಯಿಂದ ವಿಪ್ರ ಸಮಾವೇಶ – ಚಿಂತನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮ ಎಷ್ಟು ಸನಾತನವೋ ಬ್ರಾಹ್ಮಣ ಸಮಾಜ ಕೂಡ ಅಷ್ಟೇ ಸನಾತನ: ಬ್ರಾಹ್ಮಣ ಪರಿಷತ್ ರಾಜ್ಯಾಧ್ಯಕ್ಷ ವೆಂಕಟನಾರಾಯಣ್

ಅರಸಿನಮಕ್ಕಿ: ಬ್ರಾಹ್ಮಣ ಸಮಾಜ ರಾಷ್ಟ್ರೀಯವಾಗಿರುವ ಸಮಾಜ, ಧರ್ಮ ಎಷ್ಟು ಸನಾತನವೋ ಬ್ರಾಹ್ಮಣ ಸಮಾಜವೂ ಅಷ್ಟೇ ಸನಾತನ, ವೈದಿಕ ತತ್ವ ಮತ್ತು ಸಮಾಜದ ತತ್ವ ಜೊತೆಯಾಗಿ ಪಾಲಿಸಿಕೊಂಡು ಬಂದಿರುವವರು ಬ್ರಾಹ್ಮಣರು, ಸಂಸ್ಕಾರ ಬಿಟ್ಟು ಸಂಘಟನೆಇಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅಧ್ಯಕ್ಷ ಕೆ.ಎನ್ ವೆಂಕಟನಾರಾಯಣ ಹೇಳಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ ಕೊಕ್ಕಡ ವಲಯ ಇದರ ವತಿಯಿಂದ ಮಾ. 3 ರಂದು ನಡೆದ ವಿಪ್ರ ಸಮಾವೇಶ ಚಿಂತನೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಾಲಕಾಮ ಪರಶುರಾಮ ದೇವಸ್ಥಾನ ದರ್ಭೆತಡ್ಕ ಇಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ರಾಹ್ಮಣ ಜಾತಿಯಲ್ಲಿ 38 ಪಂಗಡಗಳಿದ್ದು ಬೇರೆ ಬೇರೆ ಆಚಾರ ವಿಚಾರಗಳಿಂದ ನಡೆಯುತ್ತಿದೆ. ಆದರೆ ಜನಗಣತಿಯ ಸಮಯದಲ್ಲಿ ಜಾತಿಯ ಕಾಲಂನಲ್ಲಿ ಬ್ರಾಹ್ಮಣ ಎಂದೇ ಭರ್ತಿಗೊಳಿಸಬೇಕಾಗಿದ್ದು ಉಪಜಾತಿ ನೊಂದಾಯಿಸಬಾರದು. ಹಾಗೆ ಮಾಡಿದರೆ ಬ್ರಾಹ್ಮಣರ ಸಂಖ್ಯೆ ೧೫ ಶೇ.ಡಕ್ಕೆ ಇಳಿಯುತ್ತದೆ. ಇದರಿಂದ ನಮ್ಮ ಶಕ್ತಿ ಸರಕಾರಕ್ಕೆ ಅರ್ಥಮಾಡಿಸಲು ಕಷ್ಟವಾಗುತ್ತದೆ. 7 ಶೇ. ಮಾತ್ರ ಇರುವ ಸಮಾಜದವರೂ ಕೂಡ ತಮ್ಮ ಹಕ್ಕನ್ನು ಪಡೆಯುತ್ತಿದ್ದು ಬ್ರಾಹ್ಮಣರು ತಮ್ಮ ಹಕ್ಕಿಗಾಗಿ ವಿರಾಟ್ ಶಕ್ತಿಪ್ರದರ್ಶನ ನಡೆಸುವ ಅನಿವಾರ್ಯತೆ ಇದ್ದು ಡಿ. 27-29 ರ ವರೆಗೆ ಕುಂದಾಪುರದಲ್ಲಿ ನಡೆಯುವ ಸಮಾವೇಶ ವಿಜಯಿಯಾಗಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾ| ಬ್ರಾಹ್ಮಣ ಪರಿಷತ್ ಗೌರವಾಧ್ಯಕ್ಷ ವಿಜಯರಾಘವ ಪಡುವೆಟ್ನಾಯ ವಹಿಸಿದ್ದು ಸಂಘಟನೆಯ ಮಹತ್ವ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣಾನಂದ ಚಾತ್ರ, ಶ್ರೀಶಂಕರ ವೇದ ವಿದ್ಯಾಲಯ ದರ್ಭೆತಡ್ಕ ಇಲ್ಲಿನ ಘನಪಾಟಿಗಳಾದ ಅಂಶುಮಾನ್ ಅಭ್ಯಂಕರ್, ಅಖಿಲ ಭಾರತ ಚಿತ್ಪಾವನಾ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಡೋಂಗ್ರೆ, ತಾ| ಬ್ರಾಹ್ಮಣ ಪರಿಷತ್ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಬೆಂಗಳೂರು ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಪ್ಪು, ಕೊಂಚಾಡಿ ವಿಪ್ರ ಸಮೂಹ ಸಂಸ್ಥೆ ಪ್ರತಿನಿಧಿ ನಾರಾಯಣ ಮೊದಲಾದವರು ಶುಭ ಕೋರಿದರು.
ಸಂಚಾಲಕ ಜಯರಾಮ ನೆಲ್ಲಿತ್ತಾಯ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಅನುರಾಧಾ ರಾವ್ ನಿರೂಪಿಸಿದರು. ಸ್ಥಳೀಐ ಸಂಘಟನೆ ಅಧ್ಯಕ್ಷ ವರದಶಂಕರ ದಾಮಲೆ ಪ್ರಸ್ತಾವನೆಗೈದರು. ಜಯಪ್ರಕಾಶ, ಪವಿತ್ರಾ ಎಂ ರಾವ್, ಹರಿಪ್ರಸಾದ್, ಅನುಭವ ಹಂಚಿಕೊಂಡರು. ಮೋಹನ ಉಪಾಧ್ಯಾಯ ನಿರ್ಣಯ ಮಂಡಿಸಿದರು. ಕೃಷ್ಣ ಜಿ ಗೋಖಲೆ ವಂದನಾರ್ಪಣೆಗೈದರು.

ಲತಾ ಮಂಗೇಶ್ಕರ್ ಅವರ ಮೇರ ವತನ್ ಹಾಡಿನ ಮೂಲಕ ಎಲ್ಲರೂ ಎದ್ದು ನಿಂತು ಹುತಾತ್ಮ ಯೋಧರಿಗೆ ಗೌರವಾರ್ಪಣೆಗೈದರು.
ಕಾರ್ಯಕ್ರಮ ಪ್ರಯುಕ್ತ ದೇವಳದಲ್ಲಿ ವಿಷ್ಣು ಸಹಸ್ರನಾಮ ಪಠಣ, ಗಾಯತ್ರಿ ಜಪ, ಮಹಿಳೆಯರಿಂದ ಲಲತ ಸಹಸ್ರನಾಮ, ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ನಡೆಯಿತು. ವಿದುಷಿ ಉಷಾ ಹೆಬ್ಬರ್ ಮಣಿಪಾಲ ತಂಡದವರ ನಿರ್ದೇಶನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.
ಭಂಡಿಹೊಳೆ ಶ್ರೀರಾಮ ದಾಮಲೆ, ಶ್ರೀಕರ ರಾವ್ ಅಡ್ಕಾಡಿ, ಮಂಜುಳಾ ಕಾರಂತ, ಕೊಕ್ಕಡದ ನಿವೃತ ಕನ್ನಡ ಪಂಡಿತ ಈಶ್ವರ ಭಟ್ ಮತ್ತು ರಮೇಶ್ ರಾವ್ ಕಾಯಡ ಕಳೆಂಜ ದೀಪ ಪ್ರಜ್ವಲನಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.