ಉಜಿರೆ: ಸಸ್ಯ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಬಗ್ಗೆ ಕಾರ್ಯಾಗಾರ

ಸಸ್ಯವಿಜ್ಞಾನದಲ್ಲಿ ಸಂಶೋಧನೆಗಳ ಸಾಧ್ಯತೆ ಅಪರಿಮಿತ – ಪ್ರೊ.ಕೇಶವ್ ಟಿ.ಎನ್.

ಉಜಿರೆ: ಮೂಲವಿಜ್ಞಾನಗಳಲ್ಲಿ ಪ್ರಮುಖ ಶಾಖೆಯಾಗಿರುವ ಸಸ್ಯವಿಜ್ಞಾನ ಕ್ಷೇತ್ರದಲ್ಲಿ ನೂತನ ಸಂಶೋಧನಾ ಅಧ್ಯಯನಗಳಿಗೆ ಅಪಾರ ಅವಕಾಶಗಳಿದ್ದು ವಿದ್ಯಾರ್ಥಿಗಳು ಕುತೂಹಲ ಹಾಗೂ ಸೃಜನಶೀಲತೆಯಿಂದ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಎಸ್.ಡಿ.ಎಂ. ಕಾಲೇಜು, ಉಜಿರೆಯ ಪ್ರಾಂಶುಪಾಲರಾದ ಪ್ರೊ.ಟಿ.ಎನ್. ಕೇಶವ್ ಕರೆ ನೀಡಿದರು.

 ಅವರು ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ್ದ “ಸಸ್ಯ ವಿಜ್ಞಾನ ಕ್ಷೇತ್ರದ ಇತ್ತೀಚಿಗಿನ ಬೆಳವಣಿಗೆಗಳು” ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪರಂಪರಾನುಗತವಾಗಿ ಬೆಳೆದುಬಂದ ಕೃಷಿಸಂಸ್ಕೃತಿ ಕಾಲ ಮತ್ತು ದೇಶಕ್ಕನುಗುಣವಾಗಿ ಮಾರ್ಪಾಟು ಆಗುತ್ತಿರುವ ರೀತಿಯನ್ನು ವಿವರಿಸಿದ ಅವರು ಆಧುನಿಕ ಕಾಲಘಟ್ಟದ ಆಹಾರದ ಸವಾಲುಗಳನ್ನು ಎದುರಿಸಲು ಬೇಕಾದ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ.ಕುಮಾರ ಹೆಗ್ಡೆಯವರು, ಆಧುನಿಕತೆ ಮತ್ತು ತಂತ್ರಜ್ಞಾನ ಬೆಳವಣಿಗೆಗಳ ಸಮಕಾಲೀನ ಜಗತ್ತಿನಲ್ಲಿ ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಕಾರ್ಯಾಗಾರದಲ್ಲಿ  ಗಜಾನನ ವಝೆ,  ಅನಂತ ಭಟ್ ಅವರು ಇಸ್ರೇಲ್ ತಂತ್ರಜ್ಞಾನ ಹಾಗೂ ಕೃಷಿ ಅಭಿವೃದ್ಧಿಯ ಕುರಿತು ಮತ್ತು ಮೂಡಿಗೆರೆಯ ತೋಟಗಾರಿಕಾ ಸಂಶೋಧನಾ ಕೇಂದ್ರದ ರವಿಯವರು ಸಸ್ಯ ಸಂತಾನಾಭಿವೃದ್ಧಿಯ ಇತ್ತೀಚಿನ ವಿಧಾನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಶಕುಂತಳಾ  ಸ್ವಾಗತಿಸಿ, ಅಭಿಜಿತ್ ಬಡಿಗೇರ್ ವಂದಿಸಿ, ಗಣೇಶ್ ಶೆಂಡ್ಯೆ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.