ದ್ವಿತೀಯ ಪಿಯುಸಿ ಪರೀಕ್ಷೆ 39 ವಿದ್ಯಾರ್ಥಿಗಳು ಗೈರು

ಬೆಳ್ತಂಗಡಿ: ತಾಲೂಕಿನ ಐದು ಕೇಂದ್ರದಲ್ಲಿ ಶುಕ್ರವಾರ ಪಿ.ಯು.ಸಿ ಪರೀಕ್ಷೆ ಆರಂಭವಾಗಿದ್ದು ಒಟ್ಟು 3482  ಮಂದಿ ಪರೀಕ್ಷೆಗೆ ಹಾಜರಾಗಿದ್ದು 39  ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಉಜಿರೆ ಎಸ್.ಡಿ.ಎಂ, ಪ.ಪೂ. ಕಾಲೇಜು, ಸರಕಾರಿ ಪ್ರಥಮದರ್ಜೆ ಕಾಲೇಜು ಬೆಳ್ತಂಗಡಿ, ಹೊಸಕೋಟೆ ವಾಣಿ ಪ.ಪೂ ಕಾಲೇಜು, ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಪರೀಕ್ಷೆಗೆ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಲಾಗಿತ್ತು.
ಭೌತಶಾಸ್ತ್ರದಲ್ಲಿ 1084  ಮಂದಿಯಲ್ಲಿ 1075 ಮಂದಿ ಪರೀಕ್ಷೆ ಬರೆದಿದ್ದು 9  ಮಂದಿ ಗೈರಾಗಿದ್ದರು. ಅರ್ಥಶಾಸ್ತ್ರದಲ್ಲಿ 2437 ಮಂದಿಯಲ್ಲಿ 2407  ಮಂದಿ ಪರೀಕ್ಷೆಗೆ ಹಾಜರಾಗಿದ್ದು 30  ಮಂದಿ ಪರೀಕ್ಷೆ ಹಾಜರಾಗಿರಲಿಲ್ಲ ಯಾವುದೇ ವಿದ್ಯಾರ್ಥಿ ಡಿಬಾರ್ ಆಗಿಲ್ಲ.
3  ಗಂಟೆಯ ಪರೀಕ್ಷೆ ಬೆಳಿಗ್ಗೆ 10.30 ಕ್ಕೆ ಆರಂಭಗೊಂಡು ಅಪರಾಹ್ನ 1.30 ರವರೆಗೆ ಸಮಯ ನಿಗದಿಪಡಿಸಿದ್ದು ಪರೀಕ್ಷೆ ಕೇಂದ್ರದ ಸುತ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನಕಲು ತಡೆಯಲು ಕೆಲವು ಕಾಲೇಜು ಕೊಠಡಿಯಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ ತಲಾ ಇಬ್ಬರು ಅಧೀಕ್ಷಕರು ಇದ್ದು ಒಬ್ಬರು ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಪರೀಕ್ಷೆ ಸಮಯದಲ್ಲಿ ಇಬ್ಬರು ಹೆಚ್ಚುವರಿ ಅಧೀಕ್ಷಕರು ಆಯಾ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಪ್ರಶ್ನೆ ಪತ್ರಿಕೆ ರವಾನೆ
ಜಿಲ್ಲಾಧಿಕಾರಿ ಕಚೇರಿಯಿಂದ ಆಯಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಹಶೀಲ್ದಾರ್ ಮುಖೇನ ಮುಚ್ಚಿದ ಲಕೋಟೆಯಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಯಾ ಕಾಲೇಜಿಗೆ ತಲುಪಿತು. ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10.15 ಕ್ಕೆ ಪರೀಕ್ಷಾ ಕೊಠಡಿಯೊಳಗೆ ಹಾಜರಾಗಲು ಸೂಚಿಸಲಾಗಿತ್ತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.