ಕಳಿಯ: ಮಲ್ಲೊಟ್ಟು ಬಳಿ  ಮನೆಗೆ ಆಕಸ್ಮಿಕ  ಬೆಂಕಿ ಅವಘಡ

ಕಳಿಯ: ಇಲ್ಲಿಯ ಮಲ್ಲೊಟ್ಟು ಶಕ್ತಿಸದನ ಬಳಿಯ ನಿವಾಸಿ‌ , ಕಳಿಯ  ಗ್ರಾ.ಪಂ.ಮಾಜಿ ಅಧ್ಯಕ್ಷೆ  ಶ್ರೀಮತಿ ವಾರಿಜ ರವರ ಮನೆಯಲ್ಲಿ  ಬೆಂಕಿ   ಆಕಸ್ಮಿಕ ಸಂಭವಿಸಿ ಮನೆಯಲ್ಲಿರುವ ಅಪಾರ ವಸ್ತುಗಳು ಸುಟ್ಟು  ಭಸ್ಮವಾದ ಘಟನೆ ಫೆ.28 ರಂದು ರಾತ್ರಿ ನಡೆದಿದೆ . ಘಟನೆಯಿಂದಾಗಿ  ರೆಫ್ರೀಜರೇಟರ್  ಸಹಿತ ಮನೆಯಲ್ಲಿರುವ ಅನೇಕ ವಸ್ತುಗಳು ಹಾಗೂ ವಾಸದ ಮನೆಗೆ ಹಾನಿಯಾಗಿ, ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಘಟನೆಯ  ವಿವರ :  ಶ್ರೀಮತಿ ವಾರಿಜ ರವರು  ಫೆ.28 ರಂದು ರಾತ್ರಿ 9 ಗಂಟೆಗೆ ನೆರೆಯ ಮನೆಯ ಮೆಹಂದಿ ಕಾರ್ಯಕ್ರಮಕ್ಕೆ  ತೆರಳಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಮನೆಗೆ ಬಂದು ನೋಡಿದಾಗ ಮನೆಯ ಮಾಡಿನ ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮನೆವರ ಕೂಗಾಟಕ್ಕೆ  ಸ್ಥಳೀಯರು ಧಾವಿಸಿ ತಕ್ಷಣ ಕೊಳವೆ ಬಾವಿಯ ಪಂಪು ಮೂಲಕ ನೀರು ಹಾಯಿಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಶಾಸಕರ ಭೇಟಿ,ಸಾಂತ್ವನ:
ಘಟನಾ ಸ್ಥಳಕ್ಕೆ  ಶಾಸಕ  ಹರೀಶ್ ಪೂಂಜ  ಬೇಟಿ‌ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ತನ್ನ ವೈಯಕ್ತಿಕ ಧನಸಹಾಯ ನೀಡಿದರು ಹಾಗೂ ಕಂದಾಯ ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು. ಕಳಿಯ ಪಂಚಾಯತ್  ಅಭಿವೃದ್ಧಿ ಅಧಿಕಾರಿ ಸಂತೋಷ ಕುಮಾರ್ ಪಾಟೇಲ್ ಮತ್ತು ಗ್ರಾಮ ಕರಣಿಕ ರವಿ .ವಿ.ಎಮ್. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 10 ಸಾವಿರ ರೂ.  ಪರಿಹಾರದ ಚೆಕ್ಕ್ ನ್ನು  ಸಂಘದ ಅಧ್ಯಕ್ಷ ವಸಂತ ಮಜಲು,ಕಾರ್ಯ ನಿರ್ವಹಣಾಧಿಕಾರಿ ಸತ್ಯ ಶಂಕರ್ ಭಟ್  ವಿತರಿಸಿದರು. ಈ ಸಂದರ್ಭದಲ್ಲಿ ಕಳಿಯ ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ವಿಜಯ ಗೌಡ, ಕಾರ್ಯದರ್ಶಿ ಶೇಖರ ನಾಯ್ಕ, ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್, ಸದಸ್ಯರಾದ ಸುಧಾಕರ ಮಜಲು, ದಿವಾಕರ ಎಂ., ಕಳಿಯ ಸೇವಾ ಸಹಕಾರಿ ಸಂಘದ  ನಿರ್ದೇಶಕ  ರಾಜಪ್ರಕಾಶ್, ರತ್ನಾಕರ್ ಪೂಜಾರಿ, ಶಶಿಧರ್ ಶೆಟ್ಟಿ, ಸಹಕಾರ ಭಾರತಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ನ್ಯಾಯತರ್ಪು ಬಿಜೆಪಿ ವಾರ್ಡ್ ಸಮಿತಿ‌ ಅಧ್ಯಕ್ಷ ಲೋಕೇಶ್ ನಾಳ, ಚೇತನ್ ಕುಂಠಿನಿ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.