ಕಣಿಯೂರು: ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಣಿಯೂರು: ಇಲ್ಲಿಯ ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ 4ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ಪಾಕಶಾಲೆಯ ಉದ್ಘಾಟನಾ ಕಾರ್ಯಕ್ರಮವು  ಫೆ.27 ರಂದು ನಡೆಯಿತು. ವೇದಮೂರ್ತಿ ಶ್ರೀ ಕೆ.ಯಂ.ಸುಬ್ರಹ್ಮಣ್ಯ ಮುಚ್ಚಿನ್ನಾಯರ ನೇತೃತ್ವದಲ್ಲಿ ಗಣಪತಿ ಹೋಮ, ಶ್ರೀ ದೇವಿಗೆ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ, ಪ್ರಸಾದವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಫೆ. 28 ರಂದು ರಾತ್ರಿ ಶ್ರೀ ಮಹಮ್ಮಾಯಿ ಮರಾಠಿ ಸೇವಾ ಸಂಘ ಹಾಗೂ ಸಾರ್ವಜನಿಕರು ಸೇರಿ ಶ್ರೀ ಮಹಮ್ಮಾಯಿ ದೇವಿಯ ಗೋಂದಲ ಪೂಜೆ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಕೆಲವು ಹಿರಿಯರು, ಯುವಕರು ಮತ್ತು ಮಕ್ಕಳೂ ಸೇರಿ ಗುಮ್ಮಟೆ ಭಾರಿಸುತ್ತಾ ಕುಣಿತ ನೃತ್ಯ ಮಾಡುತ್ತಾ, ದೇವಿಯ ಪದ – ಭಜನಾ ಗೀತೆ ಹಾಡಿ ಭಕ್ತಾಧಿಗಳ ಮನಸೂರೆಗೊಳಿಸಿದರು. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.