ಸುಲ್ಕೇರಿ ಬಳಿ ಅಪಘಾತ: ಸವಾರ  ಜಯಂತ ಬೆಳಾಲು ಸ್ಥಳದಲ್ಲೇ ಸಾವು

Advt_NewsUnder_1
Advt_NewsUnder_1

ನಾರಾವಿ: ಇಲ್ಲಿಯ ಸುಲ್ಕೇರಿ ಎಂಬಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ರೋಡ್ ರೋಲರ್‌ಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.28 ರಂದು ರಾತ್ರಿ ನಡೆದಿದೆ.
ಬೆಳಾಲು ಗ್ರಾಮದ ಎರ್ಮಾಳ ಮನೆ ನಿವಾಸಿ ಶ್ರೀಧರ ಪೂಜಾರಿಯವರ ಪುತ್ರ, ವಿಶಾಲ್ ಬಸ್‌ನ ನಿರ್ವಾಹಕ ಜಯಂತ(28.ವ)ರವರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೊದರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.