ಸಂಗೀತ-ಜೀವನ ಸಂಗಾತಿ ಸಂವಾದ ಕಾರ್ಯಕ್ರಮ

 

ಉಜಿರೆ : ಫೆ. 24  ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಮಣಿಕೃಷ್ಣ ಸ್ವಾಮಿ ಅಕಾಡೆಮಿ, ಸಹಜ ಗುಣಗಾನ ಸಂಗೀತ ವಿದ್ಯಾಲಯ ಬೆಳ್ತಂಗಡಿ ಇವರು ಸಂಗೀತ-ಜೀವನ ಸಂಗಾತಿ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಸಂಪನ್ಮೂಲ ವ್ಯಕ್ತಿ ಪಿ. ನಿತ್ಯಾನಂದರಾವ್ ಸಂಗೀತದ ಗುಣಧರ್ಮ ಶ್ರೇಷ್ಠ ಸಾರ್ಧಕ ನಡೆ, ಅಭ್ಯಾಸಿಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ಬಗೆ, ಸಮತೋಲನವಾದ ಮಾನಸಿಕ ಸ್ಥಿತಿ, ಸಾಮರಸ್ಯ, ಪೋಷಕರು ಮಕ್ಕಳೊಂದಿಗೆ ಸಂಗೀತ ಕಲಿಯುವ ಮನಸ್ಸು ಮಾಡುವಿಕೆ. ಹೀಗೇ ತನ್ನ ಅನುಭವಗಮ್ಯ ವಿಚಾರವನ್ನು ಅಂಗೈಯಲ್ಲಿ ಇಟ್ಟು ತೋರಿಸಿದಂತೆ ನಿರೂಪಿಸಿದರು.
ಶ್ರಿ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು. ವಿಜಯ ರಾಘವ ಪಡ್ವೆಟ್ನಾಯರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಶರತ್ ಪಡ್ವೆಟ್ನನಾಯರು ಹಾಗೂ ಕೆ.ಮೋಹನ ಬೈಪಾಡಿತ್ತಾಯ ಉಪಸ್ಥಿತರಿದ್ದರು.
ಶಿಕ್ಷಕಿ ಮೇಧಾ ಸ್ವಾಗತಿಸಿ, ಕು| ಜಯಶ್ರೀ, ಧವನ್, ವರ್ಷಾ, ಸುಪ್ರಿಯಾ ಸರ್ವರಿಗೂ ಪ್ರಿಯವಾಗುವಂತೆ ಹಾಡಿದರು. ಮದ್ದಳೆವಾದನದಲ್ಲಿ ಮಾ| ಆದಿತ್ಯಹೊಳ್ಳ ಸಹಕರಿಸಿದರು. ಪ್ರಾಸ್ತಾವಿಕ ಭಾಷಣ ಹಾಗೂ ಧನ್ಯವಾದವನ್ನು ಈ ಕಾರ್ಯಕ್ರಮ ಆಯೋಜಿಸಿದ್ದ ಸಂಗೀತ ಗುರುಗಳು ಐ.ಡಿ.ಸುರೇಶ್ ಮಾಡಿದರು. ವಿಶೇಷ ಉಪಾನ್ಯಾಸ ಸಂವಹನ ಕಾರ್ಯಕ್ರಮ ಸರ್ವರ ಪ್ರಶಂಸೆಗೆ ಪಾತ್ರವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.