ವಾಟ್ಸಪ್‌ನಲ್ಲಿ ಅವಹೇಳನಕಾರಿ ಸಂದೇಶ: ದೂರು ನೀಡಿ-ಟೆಲಿಕಾಂ ಇಲಾಖೆ

Advt_NewsUnder_1
Advt_NewsUnder_1
Advt_NewsUnder_1

ಹೊಸದಿಲ್ಲಿ: ಫೆ.23 : ವಾಟ್ಸ್‌ಆಪ್‌ನಲ್ಲಿ ಇನ್ನು ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಬಂದರೆ ಟೆಲಿಕಾಂ ಇಲಾಖೆಗೆ ದೂರು ನೀಡಬಹುದು. ಸಂದೇಶದ ಸ್ಕ್ರೀನ್‌ಶಾಟ್ ತೆಗೆದು ಇಮೇಲ್ ಐಡಿಗೆ ಕಳುಹಿಸಬಹುದು. ಈ ಬಗ್ಗೆ ದೂರ ಸಂಪರ್ಕ ಇಲಾಖೆಯೇ ಪ್ರಕಟಣೆ ಹೊರಡಿಸಿದ್ದು, ಈ ವಿಚಾರವನ್ನು ಟೆಲಿಕಾಂ ಆಪರೇಟರ್‌ಗಳು, ಪೊಲೀಸ್ ಮುಖ್ಯಸ್ಥರ ಗಮನಕ್ಕೆ ತರುತ್ತೇವೆ ಎಂದು ಟೆಲಿಕಾಂ ಇಲಾಖೆಯ ಸಂವಹನ ವಿಭಾಗದ ಕಂಟ್ರೋಲರ್ ಆಶಿಶ್ ಜೋಶಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಹಲವು ವ್ಯಕ್ತಿಗಳು ಹಾಗೂ ಪತ್ರಕರ್ತರು ಅಶ್ಲೀಲ, ಅವಹೇಳನಕಾರಿ ಮತ್ತು ಬೆದರಿಕೆ ಸಂದೇಶಗಳು ಬಂದಿರುವ ಬಗ್ಗೆ ದೂರು ನೀಡಿದ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಸಿಮ್ ಖರೀದಿ ಮಾಡುವಾಗಲೇ ಗ್ರಾಹಕರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಅರ್ಜಿ ನಮೂನೆಯಲ್ಲಿ ಘೋಷಿಸಿ ರುತ್ತಾರೆ. ಹೀಗಾಗಿ ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಬೇಕು ಎಂದು ಫೆ. 19 ರಂದು ಸರಕಾರ ಆದೇಶ ಹೊರಡಿ ಸಿತ್ತು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲ ಟೆಲಿಕಾಂ ಸೇವೆ ಪೂರೈಕೆದಾರರಿಗೆ ಸೂಚನೆ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.