`ಯುವಸಂಕಿರಣ ಬೆಳ್ತಂಗಡಿ’ ನೇತೃತ್ವದಲ್ಲಿ ಬೃಹತ್ ಉದ್ಯೋಗಮೇಳ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಇಂದು ಕೆಎಎಸ್, ಐಎಎಸ್ ಅಧಿಕಾರಿಗಳಾಗುವ ಕನಸಿನಿಂದ ಶಿಕ್ಷಣ ಪಡೆಯುವ ಅವಕಾಶವಿದೆ ಕೆ.ಹರೀಶ್ ಕುಮಾರ್.

ಬೆಳ್ತಂಗಡಿ: ಹಿಂದೆ ವಿದ್ಯಾರ್ಥಿಗಳು ಐಚ್ಛಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ನಮ್ಮ ಆಯ್ಕೆಗಳಿಗೆ ಅನುಗುಣವಾಗಿ ಶಿಕ್ಷಣ ಪಡೆದು ಆಸಕ್ತ ಕ್ಷೇತ್ರದಲ್ಲಿ ಅರ್ಹತೆಗೆ ಉದ್ಯೋಗ ಪಡೆಯಲು ಅವಕಾಶವಿದೆ. ವಿದ್ಯಾಭ್ಯಾಸಕ್ಕಿಂತಲೂ ಹೆಚ್ಚು ಕೌಶಲ್ಯ ವೃದ್ಧಿಸಿಕೊಂಡವರಿಗೆ ಬದಕುಇನ ಅವಕಾಶದ ಬಾಗಿಲು ಎಂದೂ ತೆರೆದೇ ಇದೆ ಎಂದು ವಿಧಾನಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಹೇಳಿದರು.
ಯುವಸಂಕಿರಣ ಬೆಳ್ತಂಗಡಿ ಮತ್ತು ಬಹುಜನ ವಿದ್ಯಾರ್ಥಿ ಸಂಘ (ಬಿ.ವಿ.ಎಸ್.) ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದೊಂದಿಗೆ ಭರತ್ ಕುಮಾರ್ ಸಿ.ಎ ಅವರ ಸಹಕಾರದಲ್ಲಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೃಹತ್ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಕರಾವಳಿ ಭಾಗದಲ್ಲಿ ಬ್ಯಾಂಕ್ ಉದ್ಯೋಗ, ವೈದ್ಯ, ಇಂಜಿನಿಯರ್ ಹುದ್ದೆಗೆ ಮಾತ್ರ ಅಪೇಕ್ಷೆ ಪಡುತ್ತಿದ್ದರು. ಆದರೆ ಇಂದು ಕೆಎಎಸ್, ಐಎಎಸ್ ಅಧಿಕಾರಿಗಳಾಗುವ ಕನಸುಹೊತ್ತು ಶಿಕ್ಷಣ ಪಡೆಯುವ ಅವಕಾಶವಿದೆ. ಇಂದು ಅವುಗಳಿಗೆ ಅವಕಾಶಗಳೂ ಇವೆ ಎಂದರು.
ಯುವ ಸಂಕಿರಣ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಮಾತನಾಡಿ, ಉದ್ಯೋಗ ಇಲ್ಲ ಎನ್ನುವ ಭಾವನೆ ಯಾರ ಮನಸ್ಸಿನಲ್ಲಿಯೂ ಬರಬಾರದು. ಪರಿಶ್ರಮದೊಂದಿಗೆ ಪ್ರಯತ್ನಿಸಿದರೆ ಪ್ರತಿಭೆಗೆ ತಕ್ಕ ಉತ್ತಮ ಉದ್ಯೋಗ ತಾನಾಗಿಯೇ ಅರಸಿ ಬರುತ್ತದೆ ಎಂದರು.
ಬಿ.ಎಸ್.ಪಿ. ಮೈಸೂರು ವಿಭಾಗ ಉಸ್ತುವಾರಿ ಅತ್ರಾಡಿ ಅಮೃತ ಶೆಟ್ಟಿ, ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಸಾಣೂರು ಸತೀಶ್ ಸಾಲ್ಯಾನ್, ಬಹುಜನ ಚಿಂತಕ ಮೋನಪ್ಪ ಕಣಿಯೂರು ಮಾತನಾಡಿದರು.
ವೇದಿಕೆಯಲ್ಲಿ ಬಿ.ಎಸ್.ಪಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಸಂಜೀವ ಆರ್, ಬಿ.ವಿ.ಎಸ್. ಸಂಯೋಜಕ ಸುಕೇಶ್ ಕೆ. ಮಾಲಾಡಿ,. ಡಿ,ಎಸ್.ಪಿ ಸಂಚಾಲಕ ರಮೇಶ್ ಮಡಂತ್ಯಾರು, ಬಿ.ವಿ.ಎಸ್ ಅಧ್ಯಕ್ಷ ಅಕ್ಷತ್ ಪಾಲೇದು, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಈ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಲಕ್ಷ್ಮಣ್ ಜಿ. ಎಸ್, ರಮೇಶ್ ಆರ್, ಸಂಜೀವ ಆರ್ ಇವರನ್ನು ಯುವ ಸಂಕಿರಣ ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು.
ಸುಕೇಶ್ ಕೆ ಮಾಲಾಡಿ ಸ್ವಾಗತಿಸಿ ಪ್ರಸ್ತಾಪಿಸಿದರು. ಕು| ಯೋಗಿನಿ ಕಾರ್ಯಕ್ರಮ ನಿರೂಪಿಸಿದರು. ಚಿರಂಜೀವಿ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.