ಪರಪ್ಪು ಉರೂಸ್ ಮುಬಾರಕ್

Advt_NewsUnder_1
Advt_NewsUnder_1
Advt_NewsUnder_1

ಧಾರ್ಮಿಕ ಪ್ರವಚನ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ

ಗೇರುಕಟ್ಟೆ: ವಲಿಯುಲ್ಲಾಹಿ ಫಕೀರ್ ಮುಹ್ಯುದ್ದೀನ್ ದರ್ಗಾ ಶರೀಫ್ ಪರಪ್ಪು ಹಾಗೂ ಎಂ.ಜೆ.ಎಮ್ ಗೇರುಕಟ್ಟೆ ಇವರ ವತಿಯಿಂದ ಪರಪ್ಪು ಉಪ್ಪಾಪ ಆಂಡ್ ನೇರ್ಚೆ ಹಾಗೂ ಉರೂಸ್ ಮುಬಾರಕ್ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಫೆ. 24  ರಂದು ಅಧಿಕೃತ ಚಾಲನೆ ದೊರೆಯಿತು.
ಸಯ್ಯಿದ್ ತಾಜುಲ್ ಉಲಮಾ ವೇದಿಕೆಯಲ್ಲಿ ಸಂಪನ್ನಗೊಳ್ಳುತ್ತಿರುವ ಕಾರ್ಯಕ್ರಮಕ್ಕೆ ಫೆ. 24  ರಂದು ಪರಪ್ಪು ಮಸೀದಿ ಅಧ್ಯಕ್ಷ ಅಬ್ದುಲ್ ಬಶೀರ್ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.
ಉದ್ಘಾಟನೆಯನ್ನು ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ ನೆರವೇರಿಸಿದರು.
ಅನುಸ್ಮರಣಾ ಪ್ರಭಾಷಣವನ್ನು ಅಬೂಬಕ್ಕರ್ ಫೈಝಿ ಕುಂಬಡಾಜೆ ಕೇರಳ ನೆರವೇರಿಸಿದರು.
ಫೆ. 25  ರಂದು ಪ್ರಭಾಷಣವನ್ನು ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ ನಡೆಸಿದರು.
ಫೆ. 26  ರಂದು ಓಟೆಪದವು ಹಂಝ ಮಿಸ್ಬಾಹಿ ಪ್ರವಚನ ನಡೆಸಿದರು. ಫೆ. 27 ರಂದು ಮುಹಮ್ಮದ್ ಅಶ್ರಫ್ ಜೌಹರಿ ಎರ್ಮಾಡ್ ಪ್ರವಚನ ನಡೆಸಿದರು.
ಮಸೀದಿ ಖತೀಬ್ ಯಮರುಲ್ ಫಾರೂಕ್ ಸಖಾಫಿ, ಹಸೈನಾರ್ ಸಅದಿ, ಬಿ.ಎಮ್ ಅಬ್ದುಲ್‌ರಝಾಕ್ ಸಅದಿ, ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಇವರುಗಳು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.