ನಾಗರಿಕ ಸೇವಾ ಟ್ರಸ್ಟ್: ತಾಲೂಕು ಮಟ್ಟದ ಸಮಾವೇಶ

ಬೆಳ್ತಂಗಡಿ : ನಾಗರಿಕ ಸೇವಾ ಟ್ರಸ್ಟ್‌ನ ಹಿತೈಷಿಗಳ ಮತ್ತು ನಾಗರಿಕ ಸೇವಾ ಬಳಗಗಳ ಸಕ್ರಿಯ ಸದಸ್ಯರ  ತಾಲೂಕು ಮಟ್ಟದ ಸಮಾವೇಶವು ಫೆ.26  ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಟ್ರಸ್ಟ್ ನ  ಪ್ರಧಾನಸಂಚಾಲಕಿ, ಜಿ.ಪಂ ಸ್ಥಾಯಿ ಸಮಿತಿ ಮಾಜಿ  ಅಧ್ಯಕ್ಷೆ  ಸಿ.ಕೆ. ಚಂದ್ರಕಲಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಸೋಮನಾಥ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಗಂಗಾಧರ ಗೌಡ, ಮಾಜಿ ಶಾಸಕರುಗಳಾದ  ಕೆ.ವಸಂತ ಬಂಗೇರ,  ಕೆ.ಪ್ರಭಾಕರ ಬಂಗೇರ, ಟ್ರಸ್ಟ್ ಸಲಹೆಗಾರರಾದ ಕೆ.ರಮಾನಂದ ಸಾಲ್ಯಾನ್  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾಗರಿಕ  ಸೇವಾ ಟ್ರಸ್ಟ್  ಕಾರ್ಯದರ್ಶಿಗಳಾದ ನಾರಾಯಣ ಕಿಲಂಗೋಡಿ, ಜಯಪ್ರಕಾಶ್ ಭಟ್ ಸಿ.ಹೆಚ್, ಉಪಾಧ್ಯಕ್ಷೆ ವಿದ್ಯಾ ನಾಯಕ್,   ಹಾಗೂ  ಟ್ರಸ್ಟಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.