HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪುಲ್ವಾಮಾ ದಾಳಿಗೆ ಪ್ರತೀಕಾರ: ಉಜಿರೆ ಬೆಳ್ತಂಗಡಿಯಲ್ಲಿ ಸಂಭ್ರಮ

ಬೆಳ್ತಂಗಡಿ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆಯ ಎರಡು ವಾರಗಳ ಬಳಿಕ ಭಾರತ ಪಾಕ್ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಫೆ.26 ರಂದು  ಮುಂಜಾನೆ 3.30ರ ಸುಮಾರಿಗೆ ಭಾರತೀಯ ವಾಯುಸೇನೆ ಪಡೆಯ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಎಲ್ ಒಸಿ ಒಳಗೆ ನುಗ್ಗಿ ಬಾಲಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರರ ಶಿಬಿರಗಳ ಮೇಲೆ ಬರೋಬ್ಬರಿ 1000 ಕೆಜಿಯ ಬಾಂಬ್ ಗಳ ಸುರಿಮಳೆಗೈದಿದೆ. ಇದರಿಂದ ಉಗ್ರರ ಅಡಗುತಾಣ ಸಂಪೂರ್ಣ ನಾಶವಾಗಿದ್ದು, 200ರಿಂದ 300 ಉಗ್ರರು ಬಲಿಯಾಗಿದ್ದಾರೆ.

ಈ ಹಿನ್ನಲೆಯಲ್ಲಿ ಉಜಿರೆ ಮುಖ್ಯರಸ್ತೆಯಲ್ಲಿ ಹಾಗೂ ಬೆಳ್ತಂಗಡಿ  ಪೇಟೆಯಲ್ಲಿ  ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ವಿಶ್ವ ಹಿಂದುಪರಿಷತ್, ಬಜರಂಗದಳದ  ಕಾರ್ಯಕರ್ತರು  ಹಾಗೂ ಉಜಿರೆಯ ನಾಗರಿಕರು, ಬೆಳ್ತಂಗಡಿ ನಾಗರಿಕರು  ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.