HomePage_Banner_
HomePage_Banner_
HomePage_Banner_

ಇಲಾಖಾಧಿಕಾರಿಗಳು ಗೈರು :ಕಳಿಯ ಗ್ರಾಮ ಸಭೆ ಮೂಂದೂಡಿಕೆ

Advt_NewsUnder_1

ಕಳಿಯ: ಕಳಿಯ ಗ್ರಾಮ ಪಂಚಾಯತದ 2018-19ನೇ ಸಾಲಿನ  ಗ್ರಾಮ ಸಭೆಯು  ಗ್ರಾ.ಪಂ. ಅಧ್ಯಕ್ಷ ಶರತ್ ಕಮಾರ್ ಶೆಟ್ಟಿ ಯವರ  ಅಧ್ಯಕ್ಷತೆಯಲ್ಲಿ ಫೆ.25 ರಂದು ಜರುಗಿತು.  ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಉಪಸ್ಥಿತಿ ಇಲ್ಲದ ಕಾರಣ ಗ್ರಾಮಸಭೆಯನ್ನು ಮುಂದೂಡಲಾಯಿತು. ಜಿ.ಪಂ. ಸದಸ್ಯೆ ಮಮತಾ ಎಂ ಶೆಟ್ಟಿ, ತಾ. ಪಂ.ಸದಸ್ಯ ಪ್ರವೀಣ್ ಕುಮಾರ್,ನೋಡೆಲ್  ಅಧಿಕಾರಿ ಅಕ್ಷರ ದಾಸೋಹದ ಅಧಿಕಾರಿ ಕೆ.ಜಿ.ಲಕ್ಷ್ಮಣ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾ.ಪಂ.ಉಪಾಧ್ಯಕ್ಷೆ ಅಸ್ಮಾ,  ಸದಸ್ಯರಾದ ತುಕಾರಾಮ ಪೂಜಾರಿ ಎಮ್, ಸುಧಾಕರ ಮಜಲು, ವಿಶ್ವನಾಥ ಪೂಜಾರಿ, ಪ್ರದೀಪ್ ಕುಮಾರ್,  ವಿಜಯ ಹೆಚ್ ಪ್ರಸಾದ್, ಮೋಹಿನಿ ಪೇರಾಜೆ, ಪುಷ್ಪ ರೇಷ್ಮೆ ರೋಡ್, ಮೋಹಿನಿ ಹಾಕೋಟೆ, ಪ್ರೇಮ ಮಾವಿನಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂ.ಸದಸ್ಯರಾದ ದಿವಾಕರ ಎಂ, ಕು| ಗೀತಾ ಮತ್ತು ನಳಿನಿ ಸಭೆಯಲ್ಲಿ ಗೈರು ಹಾಜರಾಗಿದ್ದರು. ಪಂ.ಸಿಬ್ಬಂದಿ ನಾಡಗೀತೆ ಹಾಡಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲು ಸ್ವಾಗತಿಸಿ, ಗತ ವರ್ಷದ ವರದಿಯನ್ನು ಸಭೆಗೆ ವಾಚಿಸಲು ಮುಂದಾದಾಗ, ಗ್ರಾಮಸ್ಥರ ಸಮಸ್ಯೆಗಳಿಗೆ ಮಾಹಿತಿ ನೀಡಲು ಮುಖ್ಯವಾಗಿ ಹಲವಾರು ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಅದ್ದರಿಂದ ಸಭೆಯನ್ನು ಮುಂದೂಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರ ಸೇನೆ ಸಂಘದ ತಾಲೂಕು ಅಧ್ಯಕ್ಷ ಕೇಶವ ಪೂಜಾರಿ ನಾಳ ಒತ್ತಾಯಿಸಿದರು. ಗ್ರಾಮಸ್ಥರು ಇದಕ್ಕೆ ಧ್ವನಿಗೂಡಿಸಿ ಅಸಮಾಧಾನ ವ್ಯಕ್ತಪಡಿಸಿದರು ಹಾಗೂ ಸಭೆಗೆ ತಗಲುವ ಖರ್ಚುಗಳನ್ನು ಗೈರು ಹಾಜರಿಯ ಅಧಿಕಾರಿಗಳಿಂದ ಭರಿಸಬೇಕು, ಪಂಚಾಯತನಿಂದ ಭರಿಸಲು ಸಾಧ್ಯವಿಲ್ಲವೆಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಇತ್ತೀಚಿಗೆ ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದಾಂಜಲಿಯನ್ನು ಸಲ್ಲಿಸಲಾಯಿತು. ನಂತರ ಗ್ರಾಮ ಸಭೆಯನ್ನು ರದ್ದು ಮಾಡುವಂತೆ ನೋಡೆಲ್  ಅಧಿಕಾರಿ ತಿಳಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.