ಬಡಗಕಾರಂದೂರು: ಸರಕಾರಿ ಶಾಲೆ ಉಳಿಸಿ ಬೆಳೆಸುವ ಬಗ್ಗೆ ಬೃಹತ್ ಸಭೆ

ಬಡಗಕಾರಂದೂರು :  ಸರಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಅಭಿಮಾನಿಗಳ ನೇತೃತ್ವದಲ್ಲಿ ದ.ಕ.ಜಿ.ಪಂ ಹಿ.ಪ್ರಾ ಶಾಲೆ ಬಡಗಕಾರಂದೂರು ಇಲ್ಲಿ ತೆರೆದು ಎಲ್ ಕೆ ಜಿ/ಯುಕೆಜಿ  ಆಂಗ್ಲ ಶಿಕ್ಷಣ ನೀಡುವ ಬಗ್ಗೆ ಬೃಹತ್ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ   ಶಾಸಕ  ಹರೀಶ್ ಪೂಂಜ ಬಡಗಕಾರಂದೂರು ಶಾಲೆಯ ಬಗ್ಗೆ ಮುಖ್ಯೋಪಾಧ್ಯಯರಿಂದ ಮಾಹಿತಿ ಪಡೆದು,  ಸರಕಾರದಿಂದ ಸಾಧ್ಯವಾಗುವಂತಹ ಅನುದಾನವನ್ನು ನೀಡುವಂತೆ ಪ್ರಯತ್ನಪಡುತ್ತೇನೆ. ನಮ್ಮ ಸರಕಾರಿ ಶಾಲೆ ಉಳಿಸಿ ಬೆಳೆಸಿ ಕಾರ್ಯಕ್ರಮಕ್ಕೆ ಬೆಂಬಲಿಸುವುದರ ಜೊತೆಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇ ನೆ  ಎಂದು ಹೇಳಿದರು

ಸರಕಾರಿ ಶಾಲೆ ಉಳಿಸಿ – ಬೆಳೆಸಿ ಆಂದೋಲನದ ರಾಜ್ಯಾಧ್ಯಕ್ಷ   ಪ್ರಕಾಶ್ ಅಂಚನ್  ಮಾತನಾಡಿ ನಮ್ಮ ಊರಿನ ಸರಕಾರಿ ಶಾಲೆ ಏಕೆ ಉಳಿಯಬೇಕು, ಮತ್ತು ಈಗಿನ ಕಾಲಘಟ್ಟದಲ್ಲಿ ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಯನ್ನು ಹೇಗೆ ಉಳಿಸಿ ಬೆಳೆಸಬೇಕೆಂದು ಸಂಪೂರ್ಣ ಮಾಹಿತಿಯನ್ನು  ನೀಡಿದರು

ಕಾರ್ಯಕ್ರಮದಲ್ಲಿ ಪುರುಶೋತ್ತಮ ಅಂಚನ್, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ  ಸತೀಶ್ ಮಿತ್ತಮಾರು, ಅಳದಂಗಡಿ ಅರಮನೆಯ ಚಾವಡಿ ನಾಯ್ಕರಾದ  ರಾಜಶೇಖರ ಅಜ್ರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ರಾವ್, ನಿವೃತ ಶಿಕ್ಷಕಿ  ಶ್ರೀಮತಿ ಜಾನಕಿ, ಶ್ರೀಮತಿ ಪ್ರೇಮ ಭಟ್, , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಿನಿ, ಅಳದಂಗಡಿ ಗಾ.ಪಂ. ಸದಸ್ಯರಾದ ಸದಾನಂದ ಉಂಗಿಲಬೈಲು, ಧರ್ಣಪ್ಪ ದೋರಿಂಜ, ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶಾಲಾ ಶಿಕ್ಷಕ ವರ್ಗ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಅಳದಂಗಡಿ ಗ್ರಾ.ಪಂ. ಸದಸ್ಯರುಗಳು, ಸಮಾಜ ಸೇವಾ ಸಂಘಟನೆಗಳಾದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಹಾಗೂ ರಾಜ ಕೇಸರಿ ಬೆಳ್ತಂಗಡಿ ಮತ್ತು ಶ್ರೀ ಸತ್ಯದೇವತೆ ಸ್ಪೋರ್ಟ್ಸ್ ಕ್ಲಬ್ ಅಳದಂಗಡಿ ಇದರ ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.

  ಎಸ್ ಡಿ ಎಂ ಸಿ ಅಧ್ಯಕ್ಷ  ಶ್ರೀನಿವಾಸ್ ರಾವ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಮಂಗಳ  ಕಾರ್ಯಕ್ರಮ ನಿರೂಪಿಸಿ, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ತಂಡದ ಸದಸ್ಯ ದೇವ್ ದಾಸ್ ಕೆ ಸಾಲ್ಯಾನ್  ಧನ್ಯವಾದ ಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.