HomePage_Banner_
HomePage_Banner_
HomePage_Banner_

2.10 ಕೋಟಿ ರೂ. ವಕೀಲರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ದ.ಕ ಜಿಲ್ಲಾ ನ್ಯಾಯಲಯ ಮತ್ತು ಬಾರ್ ಅಸೋಸಿಯೆಶನ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳ್ತಂಗಡಿಯಲಿ ರೂ.2.10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಕೀಲರ ಸಂಘದ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಫೆ.23 ರಂದು ಕೋರ್ಟ್ ಆವರಣದಲ್ಲಿ ಜರುಗಿತು.
ಶಿಲಾನ್ಯಾಸ ಕಾರ್ಯಕ್ರಮವನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಗಳಾದ ಎಸ್ ಅಬ್ದುಲ್ ನಝೀರ್ ನೆರವೇರಿಸಿದರು. ಕರ್ನಾಟಕ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಬಿ.ವಿ ನಾಗರತ್ನ, ಮುಹಮ್ಮದ್ ನವಾಝ್, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ ವೀರಪ್ಪ,ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸತ್ಯನಾರಾಯಣ ಆಚಾರ್ಯ, ಸಾಲಿಸಿಟರ್ ಜನರಲ್ ಕೆ.ಎಮ್ ನಟರಾಜ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ ನಾಯ್ಕ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇರಿ, ಕಾರ್ಯದರ್ಶಿ ಮನೋಹರ್ ಕುಮಾರ್, ಎಪಿಪಿ ಜಿ.ಕೆ ಕಿರಣ್ ಲೋಕೋಪಯೋಗಿ ಇಲಾಖಾ ಮುಖ್ಯ ನಿಹಣಾ ಅಭಿಯಂತರ ಬಿ.ಟಿ. ಕಾಂತರಾಜ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಬೆಂಗಳೂರು ಸಹಯೋಗದೊಂದಿಗೆ ಹಿರಿಯ ನ್ಯಾಯವಾದಿ ಎನ್.ಜೆ ಕಡಂಬ ಅವರಿಗೆ ಗುರುವಂದನೆ ನಡೆಯಿತು. ಇದೇ ವೇಳೆ ತಾಲೂಕಿನ 34  ಸರಕಾರಿ ಪ್ರೌಢ ಶಾಲೆಗಳಿಗೆ ಭಾರತ ಸಂವಿಧಾನ ಪುಸ್ತಕ ಕೊಡುಗೆಯಾಗಿ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.