HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್‌ರವರಿಗೆ ಸನ್ಮಾನ

ಬೆಳ್ತಂಗಡಿ : “ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ನಡೆದ ಜನಸ್ನೇಹಿ ಪೊಲೀಸ್-ಕಾನೂನು ಸ್ನೇಹಿ ಜನತೆ ಮತ್ತು ಸಾಮಾಜಿಕ ಜಾಲತಾಣಗಳ ಸಾಧಕ-ಬಾಧಕಗಳ ಕುರಿತ ಕಾರ್ಯಾಗಾರ” ದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಅಶೋಕ್ ಇವರನ್ನು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಹಿರಿಯ ನ್ಯಾಯವಾದಿ ಜೆ.ಕೆ ಪೌಲ್, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಸುದ್ದಿ ಸಮೂಹ ಸಂಸ್ಥೆ, ಸುದ್ದಿ ಮಾಹಿತ ಟ್ರಸ್ಟ್ ಆಡಳಿತ ನಿರ್ದೆಶಕ ಡಾ. ಯು.ಪಿ. ಶಿವಾನಂದ್, ಹಾಗೂ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಕುಮಾರ್ ಬಿ.ಸಿ ಬೆಳ್ತಂಗಡಿ ತಾ.ಪಂ ಕಾರ್‍ಯನಿರ್ವಹಣಾಧಿಕಾರಿ ಕುಸುಮಾಧರ, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ.ಸಂ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ಇವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.