ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ

ಪಟ್ರಮೆ: ಇಲ್ಲಿಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.20 ರಿಂದ ಫೆ.23 ರ ವರೆಗೆ ನಡೆಯಲಿದೆ. ಶ್ರೀ ಮಹಾ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಫೆ.20 ರಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ತೋರಣ ಮುಹೂರ್ತ, ಹೊರೆಕಾಣಿಕೆ, ಉಗ್ರಾಣ ಮೂಹೂರ್ತ ಜರುಗಿತು. ಫೆ.21 ರಂದು ಬೆಳಿಗ್ಗೆ ರುದ್ರಯಾಗ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ನಂತರ ಶ್ರೀ ಭೂತ ಬಲಿ ಉತ್ಸವ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಶಬರಾಯ, ಪವಿತ್ರಪಾಣಿ ವಿಷ್ಣುಮೂರ್ತಿ ಶಬರಾಯ, ಜಾತ್ರಾ ಸಮಿತಿ ಅಧ್ಯಕ್ಷ ಶಿರೀಷ ರಾಜ, ಉಪಾಧ್ಯಕ್ಷ ದಿನೇಶ ಪಾದೆ, ಕಾರ್ಯದರ್ಶಿ ಉಮೇಶ, ಜತೆಕಾರ್ಯದರ್ಶಿ ಉಮೇಶ ಅಲಂಗೂರು, ಖಜಾಂಚಿ ಲೋಕೇಶ್ ಗೌಡ, ವ್ಯವಸ್ಥಾಪನಾ ಸಮಿತಿ, ಜಾತ್ರಾ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.