ಕಳಿಯ: ಪರಪ್ಪು,ಪೆಂರ್ಬುಡ, ನೆಲ್ಲಿ ಕಟ್ಟಿ ರಸ್ತೆ ಮರು ಡಾಮಾರಿಕರಣಕ್ಕೆ ಶಿಲಾನ್ಯಾಸ 

 

ಕಳಿಯ : ಕಳಿಯ ಗ್ರಾಮದ ವ್ಯಾಪ್ತಿಯ ವಿವಿಧ ರಸ್ತೆಗಳಿಗೆ ಮರುಡಾಮಾರಿಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಫೆ.21 ರಂದು ಜರುಗಿತು . ಶಾಸಕ ಹರೀಶ್ ಪೂಂಜ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿ  ಪರಪ್ಪು- ಕೊಯ್ಯೂರು ರಸ್ತೆ ಮರುಡಾಮರಿಕರಣಕ್ಕೆ 25 ಲಕ್ಷ, ಪೆರ್ಬುಂಡ – ಕರತ್ತೂರು ರಸ್ತೆಗೆ 5 ಲಕ್ಷ ದಲ್ಲಿ ಕಾಂಕ್ರೀಟಿ ಕರಣ ಮತ್ತು ಗೇರುಕಟ್ಟೆ – ನೆಲ್ಲಿಕಟ್ಟೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆ ಹಾನಿ ಪರಿಹಾರ ನಿಧಿಯ ಮೂಲಕ ಹದಗೆಟ್ಟಿರುವ ರಸ್ತೆಗಳ ಮರು ಡಾಮಾರಿಕರಣಕ್ಕೆ ಅನುದಾವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು ಹಾಗೂ ಗೇರುಕಟ್ಟೆಯಿಂದ ಹುಣ್ಸೆಕಟ್ಟೆ ರಸ್ತೆಯ ಮಧ್ಯದಲ್ಲಿ ಸುಮಾರು 1 ಕಿ.ಮಿ.ದೂರದ ಮಣ್ಣಿನ ರಸ್ತೆಯನ್ನು ಮುಂದಿನ ದಿನಗಳಲ್ಲಿ ಡಾಮಾರಿಕರಣ ಮಾಡುವುದಾಗಿ ಹೇಳಿದರು. ಹರ್ಪಲ- ಕೊಯ್ಯೂರು ಮಧ್ಯೆ ಹಾದು ಹೋಗುವ ನದಿಗೆ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಅನುಮೋದನೆಗೆ ಕಳುಹಿಸಿ ಕೊಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಪಂ.ಇಂಜಿನಿಯರಿಂಗ್ ಬೆಳ್ತಂಗಡಿ ವಿಭಾಗದ ಸಹಾಯಕ ಅಭಿಯಂತರ ಚೆನ್ನಪ್ಪ ಮೈೂಲಿ, ಜಿಲ್ಲಾ ಪಂ.ಸದಸ್ಯೆ ಮಮತ ಯಂ. ಶೆಟ್ಟಿ, ಕಳಿಯ ಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ್, ಪಂ.ಕಾರ್ಯದರ್ಶಿ ಕುಂಜಿ , ಪಂ.ಸದಸ್ಯರಾದ ದಿವಾಕರ ಎಮ್, ತುಕಾರಾಮ ಪೂಜಾರಿ ಎಮ್, ಸುಧಾಕರ ಮಜಲು, ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್. ಹರಿಪ್ರಸಾದ್, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಸದಸ್ಯರಾದ ಶೇಕರ್ ನಾಯ್ಕ್ ಗೇರುಕಟ್ಟೆ, ರಾಜೀವ ಗೌಡ ಕಲಾಯಿತೋಟ್ಟು, ನಾಣ್ಯಪ್ಪ ಪೂಜಾರಿ ಕಲ್ಲಾಪು, ರತ್ನಕರ ಬಳ್ಳಿದಡ್ಡ, ಹಾ.ಉ.ಸಂ.ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ, ಉದ್ಯಮಿಗಳಾದ ಬಾಲಕೃಷ್ಣ ಗೌಡ ಬಿರ್ಮೊಟ್ಟು , ಯಶೋಧರ ಶೆಟ್ಟಿ ಕೊರಂಜ, ಯಾಕುಬ್ ಸುಣ್ಣಲಡ್ಡ, ದಯರಾಜ್ ಕೆ.ಪಿ. ಕಳಿಯ ಬಿ.ಜೆ.ಪಿ.ಪಂ.ಸ.ಅಧ್ಯಕ್ಷ ವಿಜಯ ಗೌಡ ಕಲಾಯಿತೊಟ್ಟು , ನ್ಯಾಯತರ್ಪು ಬಿಜೆಪಿ ಅಧ್ಯಕ್ಷ ಲೋಕೇಶ್ ನಾಳ, ರಾ.ಕೇ.ಅಧ್ಯಕ್ಷ ದಿನೇಶ್ ಪೂಜಾರಿ ಗೋವಿಂದೂರು ಹಾಗೂ ಪಕ್ಷದ ಕಾರ್ಯ ಕರ್ತರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಸೇ. ಭಾ.ಕಾರ್ಯದರ್ಶಿ ರಾಜೇಶ್ ಪೇರ್ಬುಡ ಸ್ವಾಗತಿಸಿ, ಧನ್ಯವಾದವಿತ್ತರು.

(ವರದಿ : ಕೆ.ಎನ್.ಗೌಡ.)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.