ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಹಿಂ. ಜ. ಸಮಿತಿ ಆಗ್ರಹ

ಬೆಳ್ತಂಗಡಿ: ಫೆ.14 ರಂದು ಜಮ್ಮು-ಕಾಶ್ಮೀರ ಪುಲವಾಮಾ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸೈನಿಕರ ಮೇಲೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಹೇಡಿಯಂತೆ ನಡೆಸಿದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿ ಖಂಡಿಸಿದೆ. ಉರಿ ದಾಳಿಯ ನಂತರ 2018  ರಲ್ಲಿ ಸರ್ಜಿಕಲ್ ಸ್ರೈಕ್ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಯನ್ನು ಧ್ವಂಸ ಮಾಡಿತು. ಅನಂತರವೂ ಪಾಕಿಸ್ತಾನ ಪಾಠ ಕಲಿತಿಲ್ಲ. ಉಗ್ರರು ಮತ್ತು ಪಾಕಿಸ್ತಾನದ ಸೈನಿಕರು ಭಾರತೀಯ ಸೈನಿಕರ ಹತ್ಯೆ ಮಾಡುವುದು ಇದು ಪಾಕಿಸ್ತಾನದ ಅಘೋಷಿತ ಯುಧ್ದದ ಒಂದು ಭಾಗವಾಗಿದೆ ಇದರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಜಿಲ್ಲಾ ಸಮನ್ವಯಕರಾದ ಚಂದ್ರಮೊಗೇರ್ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.