ಬೆಳ್ತಂಗಡಿ : ಸುವರ್ಣ ರಂಗ ಸಮ್ಮಾನ್ ಪುರಸ್ಕಾರ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಕರಾವಳಿಯ ಉಭಯ ಜಿಲ್ಲೆಗಳ ಹೆಸರಾಂತ ಕಲಾವಿದರುಗಳ ಕಲಾ ಪ್ರತಿಭೆಯನ್ನು ಗೌರವಿಸುವ ‘ಸುವರ್ಣ ರಂಗ ಸಮ್ಮಾನ್ -2019′ ಪರಸ್ಕಾರ ಕಾರ್ಯಕ್ರಮವು ಫೆ.20 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಕನ್ನಡದ ಖ್ಯಾತ ಕಿರುತೆರೆ/ಚಲನಚಿತ್ರ ನಟಿ ಜ್ಯೋತಿ ರೈ ಹಾಗೂ ದೇಯಿಬೈದೇತಿ ಚಲನಚಿತ್ರ ನಿರ್ದೇಶಕ ಸುರ್‍ಯೋದಯ ಪೆರಂಪಳ್ಳಿ ಇವರುಗಳನ್ನು 9 ನೇ ವರ್ಷದ ಸಾಂಸ್ಕೃತಿಕ ಕಲಾವೈಭವದ ವೇದಿಕೆಯಲ್ಲಿ ಗಣ್ಯರ ಸಮ್ಮುಖ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಡಿ.ಎಸ್.ಪಿ ಪೀತಾಂಬರ ಹೇರಾಜೆ, ನ್ಯಾಯವಾದಿ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಭುಜಬಲಿ ಧರ್ಮಸ್ಥಳ, ಸುವರ್ಣ ಆರ್ಕೇಡ್ ಮಾಲಕರಾದ ನಾಣ್ಯಪ್ಪ ಪೂಜಾರಿ, ವಿಜಯ ಗೌಡ ವೇಣೂರು, ಪತ್ರಕರ್ತರಾದ ಮನು ಬಳಂಜ, ಮಂಜುನಾಥ ರೈ, ದೇವಿಪ್ರಸಾದ್, ಮೊಬೈಲ್ ಪ್ಯಾಲೇಸ್ ಮಾಲಕ ಉಮೇಶ್, ವಿಜಯ ಕುಮಾರ್ ಅಳದಂಗಡಿ, ಸುವರ್ಣ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ, ಶ್ರೀಮತಿ ಬೇಬಿ ನಾಣ್ಯಪ್ಪ ಪೂಜಾರಿ, ಶ್ರೀಮತಿ ರಾಜಶ್ರೀ ರಮಣ್, ಶ್ರೀಮತಿ ಮಂಜುಳಾ ಪ್ರಸಾದ್, ಶ್ರೀಮತಿ ಸುಧಾಮಣಿ, ಶ್ರೀಮತಿ ಸಂಗೀತಾ ಹೇರಾಜೆ, ಶ್ರೀಮತಿ ಗೌರಿ ಫಣಿಕ್ಕರ್, ಶ್ರೀಮತಿ ಸುಧಾ ದಿನೇಶ್ ಅಮ್ಮುಣ್ಣಾಯ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ನೃತ್ಯ ಪ್ರತಿಭೆ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ ಜೀ, ಸ್ಟಾರ್ ಪ್ಲಸ್‌ಗಳ ಕುಣಿಯೋಣ ಬಾರಾ, ಡಿಐಡಿ, ಲಿಟ್ಲ್ ಮಾಸ್ಟರ್‍ಸ್, ಇಂಡಿಯನ್ ಡಾನ್ಸಿಂಗ್ ಸೂಪರ್ ಸ್ಟಾರ್ ಮುಂತಾದ ಕಾರ್‍ಯ ಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಜ್ಞಾನ ಐತಾಳ್ ನೇತೃತ್ವದ ಹೆಜ್ಜೆನಾದ ತಂಡ ಮಂಗಳೂರು ಇವರಿಂದ ಅಮೋಘ ಭಾರತೀಯ ನೃತ್ಯ ವೈಭವ ಕಲಾ ಉತ್ಸವ ಜರುಗಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.