4ನೇ ರಾಜ್ಯಮಟ್ಟದ ಕರಾಟೆ: ಕೊಕ್ಕಡ ಶಾಲೆಗೆ ಹಲವು ಬಹುಮಾನಗಳು

Advt_NewsUnder_1
Advt_NewsUnder_1

ಕೊಕ್ಕಡ: ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ಮೂಡಬಿದ್ರೆ, ಕರ್ನಾಟಕ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇಷನ್, ಸ್ಟೇಟ್ ಕರಾಟೆ ಟೀಚರ್ಸ್ ಅಸೋಸಿಯೇಷನ್ ಮತ್ತು ಎಂ.ಕೆ. ಅನಂತರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಮೂಡಬಿದ್ರೆ ಇವರ ವತಿಯಿಂದ ಇತ್ತೀಚೆಗೆ ಮೂಡಬಿದ್ರೆಯಲ್ಲಿ ಆಯೋಜಿಸಿದ್ದ 4ನೇ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ “ಕಟಾ” ವಿಭಾಗದಲ್ಲಿ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಕೊಕ್ಕಡ ವಿದ್ಯಾರ್ಥಿಗಳಾದ ಚಿರಾಯು (ಪ್ರಥಮ), ದೀಪಾ (ದ್ವಿತೀಯ), ಲೇಖನ್ (ಪ್ರಥಮ), ಸಂಪತ್ (ಪ್ರಥಮ), ರೆನಿತ್ (ತೃತೀಯ), ಪ್ರೀತಮ್ (ತೃತೀಯ), ಧ್ಯಾನ್ (ತೃತೀಯ), ಶಾನ್ (ದ್ವಿತೀಯ), ಆಲ್ಟೋ (ತೃತೀಯ), ಆದರ್ಶ್ (ತೃತೀಯ), ಚಿಂತನ್ (ತೃತೀಯ), ದಿಯಾ (ತೃತೀಯ) ಮತ್ತು ಕುಮಿಟೆ ವಿಭಾಗದಲ್ಲಿ
ಧ್ಯಾನ್ (ಪ್ರಥಮ), ರೆನಿತ್ (ತೃತೀಯ), ದಿಯಾ (ತೃತೀಯ) ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯ ಚೈತನ್ಯಾ ಇವರು ಸಂಪೂರ್ಣ ಸಹಕಾರ ನೀಡಿದ್ದು, ಕರಾಟೆ ಶಿಕ್ಷಕ ಸೆನ್ಸಾಯಿ ಅಬ್ದುಲ್ ರೆಹಮಾನ್ ಉಜಿರೆ ತರಬೇತಿ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.