ಸುಪ್ರಿಂ ಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳು ಬೆಳ್ತಂಗಡಿಗೆ

2.10  ಕೋಟಿ ರೂ. ವಕೀಲರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನ್ಯಾಯದಾನದ ಸುಲಲಿತ ಪ್ರಕ್ರೀಯೆಯಲ್ಲಿ ನ್ಯಾಯವಾದಿಗಳ ಪಾತ್ರ ಮಹತ್ವದ್ದಾಗಿದ್ದು ಆ ನಿಟ್ಟಿನಲ್ಲಿ ಅವರ ಅವಶ್ಯಕತೆಗಳಿಗೆ ಸ್ಪಂದಿಸುವುದು ಜವಾಬ್ಧಾರಿ ಎಂಬ ನಿಟ್ಟಿನಲ್ಲಿ ಸರಕಾರದ ವತಿಯಿಂದ ನೂತನ ವಕೀಲರ ಸಂಘದ ಕಟ್ಟಡಕ್ಕೆ 2.10  ಕೋಟಿ ರೂ ಮಂಜೂರುಗೊಂಡಿದ್ದು ಈ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯ ಫೆ. 23  ರಂದು ಸಂಜೆ ನ್ಯಾಯಾಲಯದ ಆವರಣದ ನಿವೇಶನದಲ್ಲಿ ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕ್ಸೇವಿಯರ್ ಪಾಲೇಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
1964  ರಿಂದ ಪ್ರಾರಂಭಗೊಂಡಿರುವ ಬೆಳ್ತಂಗಡಿ ನ್ಯಾಯಾಲಯದಲ್ಲಿ ಇದೀಗ 108 ಮಂದಿ ನ್ಯಾಯವಾದಿಗಳು ಸಂಘದ ಸದಸ್ಯರಾಗಿ ವೃತ್ತಿ ಕೈಗೊಳ್ಳುತ್ತಿದ್ದಾರೆ. ನಂತರದ ದಿನಗಳಲ್ಲಿ ಹೆಚ್ಚುವರಿ ನ್ಯಾಯಾಲಯಗಳು ಪ್ರಾರಂಭಗೊಂಡಾಗ ವಕೀಲರ ಸಂಘದ ಕಚೇರಿಯನ್ನು ಬಿಟ್ಟುಕೊಟ್ಟಿದ್ದು ಅನಾನುಕೂಲತೆ ಇತ್ತು. ಇದೀಗ ಸುಮಾರು 3400  ಅಡಿ ಸುತ್ತಳತೆಯಲ್ಲಿ ಮೂರು ಹಂತಗಳಲ್ಲಿ ನೂತನ ಕಟ್ಟಡ ರಚನೆಗೆ ನಿರ್ಧರಿಸಲಾಗಿದೆ. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಝೀರ್, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಮುಹಮ್ಮದ್ ನವಾಝ್, ಜಿಲ್ಲಾ ಸತ್ಯನಾಯಾಯಲದ ನ್ಯಾಯಾಧೀಶ ಬಿ ವೀರಪ್ಪ, ಪಿಡಬ್ಲ್ಯೂಡಿ ಸಚಿವ ಹೆಚ್.ಡಿ ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಯು,ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್,ಶಾಶಕರುಗಳಾದ ಹರೀಶ್ ಪೂಂಜ, ಹರೀಶ್ ಕುಮಾರ್, ಎಸ್.ಎಲ್ ಭೋಜೇ ಗೌಡ, ಸಾಲಿಸಿಟರ್ ಜನರಲ್ ಕೆ.ಎಮ್ ನಟರಾಜ್, ಮಾಜಿ ಶಾಸಕ ವಸಂತ ಬಂಗೇರ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ.ಬಿ ನಾಯ್ಕ್ ಮತ್ತು ಸದಸ್ಯಪಿ.ಪಿ ಹೆಗ್ಗೆ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ವಕೀಲರ ಸಂಘದ ಅಧ್ಯಕ್ಷರು, ವಕೀಲಕರ ಸಂಘದ ಕಾರ್ಯದರ್ಶಿ ಮನೋಹರ್ ಕುಮಾರ್ ಸಹಿತ ಪದಾಧಿಕಾರಿಗಳು, ಎಪಿಪಿ ಜಿ.ಕೆ ಕಿರಣ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.