ಕುತ್ರೊಟ್ಟು ವರ್ಷಾವಧಿ ಜಾತ್ರಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಕುತ್ರೊಟ್ಟು :ಶ್ರೀ ಸತ್ಯನಾರಾಯಣ ದೇವಸ್ಥಾನ ಕುತ್ರೊಟ್ಟು ಇಲ್ಲಿಯ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.16 ರಿಂದ 20  ರವರೆಗೆ ಜರುಗಿತು. ಫೆ.16  ರಂದು ಬೆಳಿಗ್ಗೆ ತೋರಣ ಮುಹೂರ್ತ, ಗಣಪತಿ ಹೋಮ, ಅಭಿಷೇಕ, ಮಹಾಪೂಜೆ ನಡೆಯಿತು. ಗಂಟೆ 11 ಕ್ಕೆ ಊರವರಿಂದ ಹೊರೆಕಾಣಿಕೆ ಸಮರ್ಪಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗಂಟೆ 8 ಕ್ಕೆ ಧ್ವಜಾರೋಹಣ, ನಿತ್ಯಬಲಿ, ಮಹಾಪೂಜೆ ನಡೆಯಿತು. ಫೆ.17  ರಂದು ಮಹಾಪೂಜೆ ರಾತ್ರಿ 8 ರಿಂದ ಬಯನ ಬಲಿ ಉತ್ಸವ, ಮಹಾಪೂಜೆ ಜರುಗಿತು. ಫೆ.18  ರಂದು ಬೆಳಿಗ್ಗೆ ದೀಪದ ಬಲಿ, ನಿತ್ಯವಿಧಿ ರಾತ್ರಿ 8 ರಿಂದ ಉತ್ಸವ, ವಸಂತಪೂಜೆ, ಮಹಾಪೂಜೆ ನಡೆಯಿತು. ಫೆ.19 ಸತ್ಯನಾರಾಯಣ ಪೂಜೆ, ನಾಗತಂಬಿಲ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 8 ಕ್ಕೆ ಕುತ್ರೊಟ್ಟು ಮನೆಯಿಂದ ಭಂಡಾರ ಬಂದು ಅಬ್ಬಗ-ದಾರಗ ಚೆನ್ನೆ ಆಟ ನಂತರ ಕುಮಾರ ದರ್ಶನ ನಡೆದು ದೇವರ ಉತ್ಸವ, ಕಟ್ಟೆಪೂಜೆ ರಾತ್ರಿ 9.30  ರಿಂದ ಸಮಿತಿಯ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಫೆ.20  ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಗಂಟೆ 7.30 ರಿಂದ ಉತ್ಸವ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ ಜರುಗಿತು. ರಾತ್ರಿ 8 ರಿಂದ ರಾಜ್ಯ ಪ್ರಶಸ್ತಿ ಜನಪದ ಕಲಾವಿದ ಉದಯಕುಮಾರ್ ಲಾಲ ಸಾರಥ್ಯದ ಕಲಾಗುಂಡಿ ಬೆಳ್ತಂಗಡಿ ಇವರಿಂದ ರಾತ್ರಿ ೮ಕ್ಕೆ ಕಾವ್ಯ-ಗಾನ-ಕುಂಚ-ಸಂಗೀತ ಸಂಭ್ರಮ (ಭಕ್ತಿ-ಭಾವ-ಜಾನಪದ ಗೀತೆಗಳ ಸಂಗಮ) ರಾತ್ರಿ ಗಂಟೆ 9 ರಿಂದ ಕುತ್ರೊಟ್ನಾಯ, ರಕ್ತೇಶ್ವರಿ ದೈವಗಳ ನೇಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.