ಶ್ರೀ ವನದುರ್ಗಾ ದೇವಾಲಯ ಕೊಯ್ಯೂರು ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಕೊಯ್ಯೂರು: ಶ್ರೀ ವನದುರ್ಗಾ ದೇವಾಲಯದ ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆದು 12  ವರ್ಷಗಳಾಗಿದ್ದು ಇದೀಗ ಮತ್ತೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಡೆಸುವ ಬಗ್ಗೆ ಪೂರ್ವಭಾವಿ ಸಭೆಯು ದೇವಸ್ಥಾನದ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ದೇವಸ್ಥಾನದ ವಠಾರದಲ್ಲಿ ಆಡಳಿತ ಮೊಕ್ತೇಸರ ಕಾಂತಾಜೆ ಈಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2020 ರ ಪ್ರಥಮ ತಿಂಗಳಲ್ಲಿ ನಡೆಸುವ ತೀರ್ಮಾನಕ್ಕೆ ಬಂದು, ಅದರ ಮೊದಲು ದೇವಸ್ಥಾನದಲ್ಲಿ 1 ಕೋಟಿ ಅಭಿವೃದ್ಧಿ ಕೆಲಸಗಳು ಆಗ ಬೇಕಾಗಿದೆ. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಂದು ಆಡಳಿತ ಮೊಕ್ತೇಸರರು ತಿಳಿಸಿದರು.
ಸಭೆಯಲ್ಲಿ ದೇವಳದ ತಂತ್ರಿಗಳಾದ ನಂದಕುಮಾರ್,ದೇವಳದ ಅರ್ಚಕ ಅಶೋಕ್ ಕುಮಾರ್, ಪೆರ್ಮುಡೆರ ರವೀಂದ್ರನಾಥ ಗೌಡ, ಉಪನ್ಯಾಸ ಮೋಹನ ಗೌಡ, ಶ್ರೀ ಕೃಷ್ಣ ಇಲೆಕ್ಟ್ರಿಕಲ್ಸ್‌ನ ಗಣೇಶ್, ಶ್ರೀಧರ ಗೌಡ ಗುಂಡಿಜಾಲು ಹಾಗೂ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಊರ ದಾನಿಗಳು ಮತ್ತು ಗಣ್ಯರು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.