ಕಾರುಣ್ಯ ಶಾಲೆಯಲ್ಲಿ 17 ನೇ ವರ್ಷದ ಉಚಿತ ಕಣ್ಣು ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

ಕಕ್ಕಿಂಜೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್, ಶ್ರೀ.ಧ.ಮಂ.ಗ್ರಾಮಾಭಿವೃದ್ಧಿ ಯೋಜನೆ ಚಾರ್ಮಾಡಿ ವಲಯ, ಮಂಗಳೂರು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮುಂಡಾಜೆ ಸಹಕಾರಿ ಸಂಘ, ಅನುಗ್ರಹ ರೈತ ಸೇವಾ ಕೂಟ, ನಾಗರಿಕಾ ಸೇವಾ ಸಮಿತಿ ಗುರುವಾಯನಕೆರೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರುಣ್ಯ ಎಜ್ಯುಕೇಶನ್ ಪೌಂಡೇಷನ್ ಕಕ್ಕಿಂಜೆ ಇವರ ನೇತೃತ್ವದಲ್ಲಿ 17 ನೇ ವರ್ಷದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಫೆ.16 ರಂದು ಕಾರುಣ್ಯ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರುಗಿತು.
ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಶಿಬಿರದ ಉದ್ಘಾಟನೆ ನೆರವೇರಿಸಿದರು. ಕಾರುಣ್ಯ ಎಜ್ಯುಕೇಶನ್ ಪೌಂಡೇಷನ್ ಸಂಚಾಲಕ ಮಹಮ್ಮದ್.ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ನಾರಾಯಣ ಫಡಕೆ, ನಿರ್ದೇಶಕ ಪ್ರಕಾಶ್ ರಾವ್, ಬೆಂದ್ರಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರದಾನ ಅರ್ಚಕ ಬಿ.ಗೋಪಾಲಕೃಷ್ಣ ಇರ್ವತ್ರಾಯ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬೇಬಿ ಚೆರಿಯನ್, ಕಕ್ಕಿಂಜೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಸಾಲಿ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಲ| ಅಶ್ರಫ್ ಆಲಿಕುಂಞಿ ಶುಭ ಕೋರಿದರು.
ಮಂಗಳೂರು ಎಸ್‌ಡಿಎಂ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಶಿಕಲಾ ರಾವ್ ಮತ್ತು ವೈದ್ಯರ ತಂಡದಿಂದ ಉಚಿತ ತಪಾಸಣೆ ಶಿಬಿರ ನಡೆಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಎ ರಹಿಮಾನ್ ಉಪಸ್ಥಿತರಿದ್ದರು.
ಕಕ್ಕಿಂಜೆ ಜುಮ್ಮಾ ಮಸ್ಜಿದ್ ಕೋಶಾಧಿಕಾರಿ ಇಸ್ಮಾಯಿಲ್ ಗೋಲಿದಡಿ, ಕಕ್ಕಿಂಜೆ ಎಸ್.ಎಂ.ಎಸ್ ಶಾಮಿಯಾನದ ಆದಂ, ವಿ ಏಂಡ್ ವಿ ಮಾರುತಿ ಸರ್ವಿಸಸ್‌ನ ಬಾಬುರಾಜ್, ಉದ್ಯಮಿ ಮಹಮ್ಮದ್ ಮನ್ಸೂರ್ ಸಹಭಾಗಿತ್ವ ನೀಡಿದರು.
ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಧು ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಲಾಯಿಲ ಸಹಿತ ಉಪನ್ಯಾಸಕವೃಂದದವರು ಸಹಕಾರ ನೀಡಿದರು.
ಶಿಕ್ಷಕಿ ರೇವತಿ ದಿನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ವಿದ್ಯಾರ್ಥಿಗಳಿಗೆ ಫಲಕ ಹಾಗೂ ಪ್ರಮಾಣಪತ್ರ ವಿತರಿಸಲಾಗಿದ್ದು ಶಿಕ್ಷಕಿಯರರಾದ ಫೌಝಿಯಾ ಮತ್ತು ರೆಹನಾ ಮುಂಡಾಜೆ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.