ಕಕ್ಕಿಂಜೆ: ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಕಕ್ಕಿಂಜೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್, ಶ್ರೀ.ಧ.ಮಂ.ಗ್ರಾಮಾಭಿವೃದ್ಧಿ ಯೋಜನೆ ಚಾರ್ಮಾಡಿ ವಲಯ, ಮಂಗಳೂರು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮುಂಡಾಜೆ ಸಹಕಾರಿ ಸಂಘ, ಅನುಗ್ರಹ ರೈತ ಸೇವಾ ಕೂಟ, ನಾಗರಿಕಾ ಸೇವಾ ಸಮಿತಿ ಗುರುವಾಯನಕೆರೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರುಣ್ಯ ಎಜ್ಯುಕೇಶನ್ ಪೌಂಡೇಷನ್ ಕಕ್ಕಿಂಜೆ ಇವರ ನೇತೃತ್ವದಲ್ಲಿ 17 ನೇ ವರ್ಷದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಫೆ.16 ರಂದು ಕಾರುಣ್ಯ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಜರುಗಿತು.
ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು. ಕಾರುಣ್ಯ ಎಜ್ಯುಕೇಶನ್ ಪೌಂಡೇಷನ್ ಸಂಚಾಲಕ ಮಹಮ್ಮದ್.ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಡಾಜೆ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ  ನಾರಾಯಣ ಫಡಕೆ , ನಿರ್ದೇಶಕ ಪ್ರಕಾಶ್ ರಾವ್, ಬೆಂದ್ರಾಳ ಗೋಪಾಲಕೃಷ್ಣ ದೇವಸ್ಥಾನದ ಪ್ರದಾನ ಅರ್ಚಕ ಬಿ.ಗೋಪಾಲಕೃಷ್ಣ ಇರ್ವತ್ರಾಯ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಬೇಬಿ ಚೆರಿಯನ್, ಕಕ್ಕಿಂಜೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಸಾಲಿ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಉಪಸ್ಥಿತರಿದ್ದರು.
ಮಂಗಳೂರು ಶ್ರೀ.ಧ.ಮಂ.ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಶಿಕಲಾ ರಾವ್ ಮತ್ತು ವೈದ್ಯರ ತಂಡದಿಂದ ವೈದ್ಯಕೀಯ ತಪಾಸಣೆ ನಡೆಯಿತು. 130 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಕಕ್ಕಿಂಜೆ ಜುಮ್ಮಾ ಮಸೀದಿ ಕೋಶಾಧಿಕಾರಿ ಇಸ್ಮಾಯಿಲ್ ಗೋಲಿದಡಿ, ಕಕ್ಕಿಂಜೆ ಎಸ್.ಎಂ.ಎಸ್ ಶಾಮಿಯಾನದ ಆದಂ, ವಿ&ವಿ ಮಾರುತಿ ಸರ್ವಿಸಸ್‌ನ ಬಾಬುರಾಜ್, ಉದ್ಯಮಿ ಮಹಮ್ಮದ್ ಮನ್ಸೂರ್, ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ಚಂದ್ರಪ್ಪ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಧು,ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಲಾಯಿಲ  ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.