ಭಗವಾನ್ ಶ್ರೀ ಬಾಹುಬಲಿ 4ನೇ ಮಹಾಮಜ್ಜನಕ್ಕೆ ವೈಭವದ ಚಾಲನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ 4 ನೇ ಮಹಾಮಸ್ತಕಾಭಿಷೇಕಕ್ಕೆ ಫೆ.16 ರಂದು ಚಾಲನೆ ನೀಡಲಾಯಿತು.

ಬೆಳಿಗ್ಗೆ  6.30ಕ್ಕೆ  ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಭವ್ಯ ಅಗ್ರೋದಕ ಮೆರವಣಿಗೆ ರತ್ನಗಿರಿಗೆ ತಲುಪಿದ ಬಳಿಕ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಸ್ತಕಾಭಿಷೇಕ ನಡೆಯಿತು.
ಕ್ರಮವಾಗಿ ಜಲಾಭಿಷೇಕ, ನಾಳೀಕೇರ, ಇಕ್ಷುರಸ (ಕಬ್ಬಿನ ಹಾಲು), ಹಾಲು, ಕಲ್ಕ ಚೂರ್ಣ, ಅರಶಿನ, ಕಷಾಯ, ಚತುಷ್ಕೋಣ ಕಲಶ, ಚಂದನ, ಅಷ್ಟಗಂಧ ಅಭಿಷೇಕ ನಡೆದ ಬಳಿಕ ಪುಷ್ಪವೃಷ್ಟಿ, ಸುವರ್ಣ, ಬೆಳ್ಳಿ ಹಾಗೂ ರತ್ನಗಳ ವೃಷ್ಟಿ ಬಳಿಕ ಪೂರ್ಣ ಕುಂಭ ಅಭಿಷೇಕದೊಂದಿಗೆ ಮಸ್ತಕಾಭಿಷೇಕ ಮುಕ್ತಾಯಗೊಂಡಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಕುಟುಂಬದವರು ವಿವಿಧ ಮಂಗಲ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಿದರು.
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು, ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೊದಲಾದವರು ಮಸ್ತಕಾಭಿಷೇಕ ಮಾಡಿದರು.
ನಾಡೋಜ ಹಂಪನಾಗರಾಜಯ್ಯ, ಕಮಲಾ ಹಂಪನಾ, ಡಾ. ಬಿ.ಪಿ. ಸಂಪತ್ ಕುಮಾರ್ ಮಸ್ತಕಾಭಿಷೇಕದ ವೀಕ್ಷಕ ವಿವರಣೆ ನೀಡಿದರು.
ಜಿನಭಕ್ತಿಗೀತೆಗಳ ಗಾಯನ, ಬಾಹುಬಲಿ ಬಗ್ಯೆ ಭಕ್ತಿಗೀತೆಗಳನ್ನು ಶ್ರಾವಕ-ಶ್ರಾವಕಿಯರು ಹಾಡಿ, ಆನಂದದಿಂದ ನರ್ತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.